ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಒಟಿಟಿಗೆ ಯಾವಾಗ ಎಂದು ಜನ ಕಾದು ಕುಳಿತಿದ್ರು. ಈ ಲವ್ ಸ್ಟೋರಿ ವೀಕ್ಷಕರನ್ನು ಮೋಡಿ ಮಾಡಿತ್ತು. ನಟ-ಚಲನಚಿತ್ರ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಬ್ಯಾನರ್ ಪರವಃ ಸ್ಟುಡಿಯೋದಿಂದ ಸಿನಿಮಾಗೆ ಬೆಂಬಲ ನೀಡಿತ್ತು.
ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಈ ಸಿನಿಮಾ ಪಡೆದುಕೊಂಡಿತ್ತು. ಚಂದ್ರಜಿತ್ ಪರಂವಾ ಸ್ಟುಡಿಯೋಸ್‌ನ ಸೆವೆನ್ ಆಡ್ಸ್ ಬರಹಗಾರರಲ್ಲಿ ಒಬ್ಬರು.
ಮೂಲಗಳ ಪ್ರಕಾರ ಸಿನಿಮಾ ಸ್ಟ್ರೀಮಿಂಗ್ ಹಕ್ಕುಗಳು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆದರೆ ಯಾವಾಗ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂಬ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ವರದಿಗಳ ಪ್ರಕಾರ ಮೊದಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೊದಲಿಗೆ ಒಟಿಟಿಗೆ ಬರುತ್ತಿದ್ದು, ಬಳಿಕ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿದೆ.
ಸಿನಿಮಾ ರಿಲೀಸ್‌ಗೂ ಮುಂಚೆ ರಕ್ಷಿತ್ ಶೆಟ್ಟಿ ಅವರು ನಾಯಕ ವಿಹಾನ್ ಬಗ್ಗೆ ಮಾಹಿತಿ ಹಂಚಿಕೊಮಡಿದ್ದರು. ಕಣ್ಣಲ್ಲಿಯೇ ಎಲ್ಲವನ್ನೂ ಹೇಳಿ ಬಿಡೋ ಶಕ್ತಿ ನಾಯಕ ನಟ ವಿಹಾನ್ ಗೌಡ ಅವರಿಗೆ ಇದೆ.
ವಿಹಾನ್ ಮತ್ತು ಅಂಕಿತಾ ಅಮರ್ ತುಂಬಾನೆ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ. ರೋಮ್ಯಾಂಟಿಕ್ ಕಥೆಯನ್ನ ಇವರಿಂದ ವಿಭಿನ್ನವಾಗಿಯೇ ಹೇಳಿಸೋ ಕೆಲಸವನ್ನ ಡೈರೆಕ್ಟರ್ ಚಂದ್ರಜಿತ್ ಮಾಡಿದ್ದಾರೆ ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದರು. ಚಿತ್ರಕ್ಕೆ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಾಹಕ ಮಾಡಿದ್ದಾರೆ.