ನ್ಯೂಸ್

ಐಎಎಸ್ ಅಧಿಕಾರಿಗಳ ವರ್ಗಾವಣೆ

vinaymk1969

ಬೆಂಗಳೂರು: ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜಕುಮಾರ್ ಕತ್ರಿ, ನಾಗಾಂಬಿಕ ದೇವಿ ಸೇರಿ 13 ಹಿರಿಯ ಐಎಎಸ್ ಅಧಿಕಾರಿಗಳಿಗೆ ಸರ್ಕಾರ ಮಂಗಳವಾರ ವಿವಿಧ ಜವಾಬ್ದಾರಿ ನೀಡಿ ಸ್ಥಳ ನಿಯುಕ್ತಿಗೊಳಿಸಿದೆ. ರಾಜಕುಮಾರ್ ಕತ್ರಿ - ಕಾರ್ವಿುಕ ಇಲಾಖೆ (ಸಮ ಪ್ರಭಾರ), ಎಂ.ನಾಗಾಂಬಿಕ ದೇವಿ ಸಮಾಜ ಕಲ್ಯಾಣ ಇಲಾಖೆ ( ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಪ್ರಭಾರ), ಮನೋಜ್ ಜೈನ್​- ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ), ಪಿ.ರಾಜೇಂದ್ರ ಚೋಳನ್​ -ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು ಮತ್ತು ಐಟಿ), ಆರ್ ವಿನೋತ್ ಪ್ರಿಯ - ನಿರ್ದೇಶಕರು, ಸಣ್ಣ ಮತ್ತು ಮಧ್ಯಮ ಉದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಬಿ ಆರ್ ಮಮತಾ- ಹೆಚ್ಚುವರಿ ಯೋಜನಾ ನಿರ್ದೇಶಕರು ಸಕಾಲ ಮಿಷನ್, ಸಿಂಧೂ ಬಿ ರೂಪೇಶ್​ -ನಿರ್ದೇಶಕರು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸ್ (ಡಿಪಿಎಆರ್), ಪೊಮ್ಮಲ ಸುನಿಲ್ ಕುಮಾರ್​ -ವಿಜಯಪುರ ಜಿಲ್ಲಾಧಿಕಾರಿ, ಕೆ.ವಿ.ರಾಜೇಂದ್ರ -ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎಚ್.ವಿ. ದರ್ಶನ್​ -ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ, ಎಚ್.ಎನ್.ಗೋಪಾಲ ಕೃಷ್ಣ - ಎಂ.ಡಿ. ಮೖಸೂರು ಸಕ್ಕರೆ ಕಂಪನಿ , ಎಸ್.ಎಂ.ಕವಿತಾ ಎಸ್. ಮಣ್ಣಿಕೇರಿ- ಚಿತ್ರದುರ್ಗ ಜಿಲ್ಲಾಧಿಕಾರಿ, ಪಾಟೀಲ್ ಯಲ ಗೌಡ ಶಿವನಗೌಡ - ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ , ಮೈಸೂರು.