ನವದೆಹಲಿ: ಆರೋಗ್ಯವನ್ನೂ ಲೆಕ್ಕಿಸದೆ ಕರೊನಾ ಮಹಾಮಾರಿ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಭಾನುವಾರ ಸೇನೆ ಹೂವಿನ ಮಳೆಗೈದು ಅಭಿನಂದಿಸಿದೆ. ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಸೇರಿ ದೇಶದ ವಿವಿಧ ಕರೊನಾ ಆಸ್ಪತ್ರೆಗಳ ಮೇಲೆ ಸೇನೆಯ ವಿಮಾನ ಹಾಗೂ ಹೆಲಿಕಾಪ್ಟರ್ಗಳು ಹೂವು ಚೆಲ್ಲಿ ಗೌರವ ಸೂಚಿಸಿವೆ.
ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಮುಖ್ಯಸ್ಥರ ಪ್ರತಿನಿಧಿಗಳಾದ ಏರ್ ವೈಸ್ ಮಾರ್ಷಲ್ ಪಿ.ಕೆ. ಘೋಷ್, ರೇರ್ ಅಡ್ಮಿರಲ್ ಎಂ.ಸಿ. ಕ್ಯಾರ್ಟಿ ಹಾಗೂ ಮೇಜರ್ ಜನರಲ್ ಅಲೋಕ್ ಕಾಕೆರ್ ದೆಹಲಿಯಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದರು.
ಗೋವಾದಲ್ಲಿ ಯುದ್ಧವಿಮಾನಗಳ ಉಡಾಹಕ ನೌಕೆ ಐಎನ್ಎಸ್ ಹಂಸದ 1,500 ಸಿಬ್ಬಂದಿ ರನ್ವೇ ಮೇಲೆ ಕರೊನಾ ವಾರಿಯರ್ಸ್ಗೆ ಧನ್ಯವಾದ ಸೂಚಿಸುವ ಅಕ್ಷರಗಳ ರೀತಿಯಲ್ಲಿ ಮಾನವ ಸರಪಳಿ ನಿರ್ವಿುಸಿ ಗೌರವ ಅರ್ಪಿಸಿದರು.
ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿ ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ಯೋಧರಿಗೆ ಪುಷ್ಪನಮನದ ಮೂಲಕ ಗೌರವ ಸೂಚಿಸಿದ್ದ ಕ್ಕಾಗಿ ಸೇನೆಗೆ ಧನ್ಯವಾದ ಅರ್ಪಿಸುತ್ತೇನೆ. ಈ ಸವಾಲಿನ ಸಮಯದಲ್ಲಿ ಇಡೀ ದೇಶ ಒಗ್ಗಟ್ಟಾಗಿ ನಿಂತಿದೆ. | ರಾಜನಾಥ್ ಸಿಂಗ್ ರಕ್ಷಣಾ ಸಚಿವ