Pooja Hegde: ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’, ‘ಹೌಸ್ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಸೌತ್ ಬ್ಯೂಟಿ, ನಟಿ ಪೂಜಾ ಹೆಗ್ಡೆ ಅದ್ಯಾಕೋ ತೆಲುಗು ಚಿತ್ರರಂಗದಿಂದ ಕೊಂಚ ದೂರ ಉಳಿದಂತೆ ಕಂಡುಬಂದಿದೆ. ಪ್ರಸ್ತುತ ಬಾಲಿವುಡ್, ತಮಿಳು ಚಿತ್ರಗಳಲ್ಲಿ ಸಖತ್ ಬಿಜಿಯಾಗಿರುವ ಪೂಜಾ, ಕಳೆದ ವರ್ಷ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯದೆ, ಟಾಪ್ ನಟಿಯರ ಸಾಲಿನಿಂದ ಬಹಳ ದೂರ ಉಳಿದಿದ್ದರು.
ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ನಕಲಿ ಆಧಾರ್-ಪಾನ್ ಕಾರ್ಡ್ ಸಿದ್ಧ! ChatGPT ಎಡವಟ್ಟಿನಿಂದ ಸೈಬರ್ ಕ್ರೈಮ್ ಹೆಚ್ಚು!? ಹೀಗಿದೆ ವರದಿ
ಇತ್ತೀಚೆಗಷ್ಟೇ ಒಂದು ತಮಿಳು ಚಿತ್ರಕ್ಕೆ ನಾಯಕಿಯ ಅವಶ್ಯಕತೆ ಇತ್ತು. ಹೀಗಾಗಿ ಆಡಿಷನ್‌ಗೆ ತೆರಳಿದ್ದ ಪೂಜಾ ಹೆಗ್ಡೆ, ಅಲ್ಲಿ ತಮಗಾದ ಅನುಭವವನ್ನು ಕುರಿತು ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. "ತಮಿಳು ಚಿತ್ರವೊಂದರ ಆಡಿಷನ್‌ಗೆ ನಾನು ಹೋಗಿದ್ದೆ. ಆಗ ಆಡಿಷನ್ ಮಾಡಿದ ಚಿತ್ರತಂಡದವರು ನನ್ನನ್ನು ಒಂದು ಬಲವಾದ ಕಾರಣಕ್ಕಾಗಿ ರಿಜೆಕ್ಟ್ ಮಾಡಿದರು. ಅಸಲಿಗೆ ಅವರು ಕೊಟ್ಟ ಕಾರಣ ನನ್ನ ವಯಸ್ಸು. ಆ ಪಾತ್ರಕ್ಕೆ ನನ್ನ ವಯಸ್ಸು ಇನ್ನೂ ಹೆಚ್ಚಿರಬೇಕಿತ್ತಂತೆ. ಹೀಗಾಗಿ ಆ ಪಾತ್ರಕ್ಕೆ ನನಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದ ಓರ್ವ ಹೆಣ್ಣುಮಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು" ಎಂದು ಹೇಳಿದ್ದಾರೆ.
"ಇಂತಹ ತಿರಸ್ಕಾರಗಳು ನನ್ನನ್ನು ನಟಿಯಾಗಿ ಮುಂದುವರಿಯುವುದನ್ನು ತಡೆಯಲು ಸಾಧ್ಯವಿಲ್ಲ. ರಿಜೆಕ್ಟ್ ಆದೆ ಎಂಬ ಕಾರಣಕ್ಕೆ ನಾನು ಕುಗ್ಗುವುದಿಲ್ಲ. ಬದಲಿಗೆ ಇನ್ನಷ್ಟು ಸಾಬೀತುಪಡಿಸಬೇಕು ಎಂಬ ಹಠ ಹೆಚ್ಚಾಗುತ್ತದೆ. ಯಾವುದೇ ಪಾತ್ರವನ್ನು ನಾನು ಮಾಡಬಲ್ಲೆ ಎಂಬ ನಂಬಿಕೆ ನಿರ್ಮಾಪಕರಲ್ಲಿ ಮೂಡುವಂತೆ ಮಾಡುವುದು ನನ್ನ ಗುರಿ. ಆಡಿಷನ್‌ಗಳಿಗೆ ಹೋದಾಗ ನಾನು ಕಷ್ಟಪಟ್ಟು ಕೆಲಸ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ ಮತ್ತು ದುರಹಂಕಾರವನ್ನು ತೋರಿಸುವುದಿಲ್ಲ. ಇದೆಲ್ಲದಕ್ಕಿಂತ, ನಟಿಯಾಗಿ ಆಡಿಷನ್‌ಗಳಿಗೆ ಹೋಗಲು ಎಂದಿಗೂ ನಾಚಿಕೆ ಪಡುವುದಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ತಿಲಕ್ ವರ್ಮಾಗೆ ಹೀಗಾಗಬಾರದಿತ್ತು! ಇದು ಸರಿಯಲ್ಲ; ಟೀಕೆಗಳ ಬೆನ್ನಲ್ಲೇ ಮೌನಮುರಿದ ಕ್ಯಾಪ್ಟನ್ ಹಾರ್ದಿಕ್ | Tilak Varma
ಪ್ರಸ್ತುತ ಪೂಜಾ ಹೆಗ್ಡೆ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ 'ರೆಟ್ರೋ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಸ್ಟಾರ್ ನಟ ಸೂರ್ಯ ಜತೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಇದರೊಟ್ಟಿಗೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಕನ್' ಚಿತ್ರಕ್ಕೂ ಪೂಜಾ ಅವರೇ ಹೀರೋಯಿನ್. ಈ ಎರಡು ಬಹುನಿರೀಕ್ಷಿತ ಚಿತ್ರಗಳಾಗಿದ್ದು, ಕಾಲಿವುಡ್ನಲ್ಲಿ ಪೂಜಾ ಹೇಗೆ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).