ನ್ಯೂಸ್

ವೆಸ್ಟರ್ನ್ ದೇಶಗಳಿಗಿಂತ ಭಾರತವೇ ನನಗಿಷ್ಟ; ಅಮೆರಿಕದಲ್ಲಿರುವುದಕ್ಕಿಂತ ಸ್ವಾತಂತ್ರ್ಯ ಭಾವನೆ ಇಲ್ಲಿದೆ.. : ಆಫ್ರಿಕ್​ ವ್ಯಕ್ತಿ ಹೇಳಿಕೆ ವೈರಲ್​! | India

India: ಪ್ರಪಂಚದ ವಿವಿಧ ದೇಶಗಳು ತನ್ನದೇ ಆದ ವಿಭಿನ್ನ ಸಂಸ್ಕೃತಿಯನ್ನು ಹೊಂದಿವೆ. ಈ ವಿಭಿನ್ನತೆಯಿಂದಲೇ ಜಗತ್ತಿನದ್ಯಾಂತ ಜನರನ್ನು ತಮ್ಮತ್ತ ಸೆಳೆಯುತ್ತವೆ. ಇದರಲ್ಲಿ ಭಾರತವೂ ಒಂದು. ಹೌದು, ಭಾರತ ಒಂದು ವಿಭಿನ್ನತೆಗೆ ಸೀಮಿತವಲ್ಲ. ವಿವಿಧ ವಿಚಾರಧಾರೆಗಳ ಜತೆಗೆ ಪ್ರಮುಖವಾಗಿ ಆಧ್ಯಾತ್ಮದತ್ತ ಜನರನ್ನು ಬರಮಾಡಿಕೊಳ್ಳುತ್ತದೆ. ಇದು ನಿನ್ನೆ ಮೊನ್ನೆಯದಲ್ಲ ಪರಂಪರೆಯಿಂದ ಭಾರತ ತನ್ನತ್ತ ಜನರನ್ನು ಕೈ ಬೀಸಿ ಕರೆಯುತ್ತಿದೆ. ಇದೀಗ ಆಫ್ರಿಕಾದ ವ್ಯಕ್ತಿಯೊಬ್ಬ ಭಾರತದಲ್ಲೇ ಇರಲು ಬಯಸುತ್ತಿದ್ದಾರೆ. ಅಲ್ಲದೆ, ಭಾರತದಲ್ಲೇ ವಾಸಿಸಲು 10 ಕಾರಣಗಳನ್ನು ನೀಡಿದ್ದಾರೆ.

ಹೌದು, 2021 ರಲ್ಲಿ ಭಾರತಕ್ಕೆ ತೆರಳಿದ ನೈಜೀರಿಯಾದ ವ್ಯಕ್ತಿ ಪ್ಯಾಸ್ಕಲ್ ಒಲಾಲೆಯ್, ವೆಸ್ಟರ್ನ್ ದೇಶಗಳಿಗಿಂತ ಭಾರತವನ್ನು ಏಕೆ ಇಷ್ಟಪಡುತ್ತಾರೆ ಎಂಬುದಕ್ಕೆ 10 ಕಾರಣಗಳನ್ನು ಹಂಚಿಕೊಂಡಿದ್ದಾರೆ, ಶಾಂತಿ, ಸುರಕ್ಷತೆ, ಕೈಗೆಟುಕುವ ಬೆಲೆ ಮತ್ತು ಜನಾಂಗೀಯತೆಯಿಂದ ಸ್ವಾತಂತ್ರ್ಯವನ್ನು ಇನ್‌ಸ್ಟಾಗ್ರಾಮ್ ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದು, ಇದೀಗ ಭಾರೀ ವೈರಲ್ ಆಗಿದೆ.

ಅಗ್ಗದ ಬಾಡಿಗೆ ಮತ್ತು ಭದ್ರತೆಯಿಂದ ಹಿಡಿದು ಆಹಾರದವರೆಗೆ, ಅವರು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ವೀಡಿಯೊದಲ್ಲಿ ಅವರು ಉಲ್ಲೇಖಿಸಿರುವ ಹತ್ತು ವಿಷಯಗಳು ಇಲ್ಲಿವೆ..

1.ನಾನು ಇಲ್ಲಿ ಆತಂಕದಿಂದ ಭಯಪಡಲ್ಲ, ನಿಜವಾಗಿ ನನಗೆ ಶಾಂತಿ ಅನಿಸುತ್ತದೆ.

2.ನನ್ನ ಚರ್ಮದ ಬಣ್ಣದ ಕಾರಣಕ್ಕಾಗಿ ನನ್ನನ್ನು ಬೆದರಿಕೆಯಂತೆ ನಡೆಸಿಕೊಳ್ಳುತ್ತಿಲ್ಲ.

3.ಜೀವನ ಸರಳವಾಗಿದೆ. ಯಾವುದೇ ಫ್ಲೆಕ್ಸ್ ಸಂಸ್ಕೃತಿ ಇಲ್ಲ, ನಕಲಿ ಗಡಿಬಿಡಿ ಇಲ್ಲ.

4. "ವಿಷಕಾರಿ"(ಜನಾಂಗೀಯ ನಿಂದನೆ) ಎಂಬ ಹಣೆಪಟ್ಟಿ ಕಟ್ಟದೆಯೇ ನಾನು ಇಲ್ಲಿ ಬದುಕಬಲ್ಲೇ

5.ಜನರು ಸ್ಪಷ್ಟವಾಗಿ ಹೇಳ್ತಾರೆ, ಆದರೆ ಬ್ಲ್ಯಾಕ್​​ ಎಂಬುದು ಅದು ಪ್ರಾಮಾಣಿಕ..

6. ನಾನು ಕಪ್ಪು ಎಂದು ನನಗೆ ನಿರಂತರವಾಗಿ ನೆನಪಿಸಲಾಗುತ್ತಿಲ್ಲ, ಅದು ನನ್ನ ಸಂಪೂರ್ಣ ಗುರುತು ಅಲ್ಲ.

7.ನಾನು ಅಮೆರಿಕದಲ್ಲಿರುವುದಕ್ಕಿಂತ ಇಲ್ಲಿ ರಾತ್ರಿ ಬೀದಿಗಳಲ್ಲಿ ನಡೆಯುವುದು ಸುರಕ್ಷಿತವಾಗಿದೆ.

8.ಬಾಡಿಗೆ ಅಗ್ಗ. ಆಹಾರ ಸಹಜ. ಜೀವನವು ಕಡಿಮೆ ಒತ್ತಡದಿಂದ ಕೂಡಿದೆ.

9.ಕಾಗದದ ಮೇಲೆ ಮಾರಾಟವಾಗುವ ಸ್ವಾತಂತ್ರ್ಯವಲ್ಲ, ನಿಜವಾದ ಸ್ವಾತಂತ್ರ್ಯದ ಭಾವನೆ ಇದೆ.

10.ಎಲ್ಲಕ್ಕಿಂತ ಮುಖ್ಯವಾಗಿ, ನಾನು ಹೇಗಿದ್ದೇನೆ ಎಂಬುದರ ಮೇಲೆ ಅಲ್ಲ, ಬದಲಾಗಿ ನಾನು ಯಾರೆಂಬುದಕ್ಕೆ ಗೌರವ ಸಿಗುತ್ತದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದ್ದು, ಎರಡು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ.(ಏಜೆನ್ಸೀಸ್​)