ಚಿಕ್ಕಮಗಳೂರು: ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಿ.ಟಿ.ರವಿ ಸಚಿವ ಸ್ಥಾನ ಬಿಡಬೇಕು. ನನಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾವುದೇ ಬೇಸರವಿಲ್ಲ ಎಂದು ಈ ಹಿಂದೆಯೇ ಹೇಳಿದ್ದ ಸಚಿವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜೀನಾಮೆ ಪತ್ರವನ್ನು ಯಾವುದೇ ಗೊಂದಲಗಳಿಲ್ಲದೆ ಟೈಪ್ ಮಾಡಿಟ್ಟುಕೊಂಡಿದ್ದೇನೆ. ಅಕ್ಟೋಬರ್ 2ರಂದು ಬೆಂಗಳೂರಿಗೆ ಹೋಗಿ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ? ಕ್ಲಿನಿಕಲ್ ಟ್ರಯಲ್ನಿಂದ ಹೊರಬಿತ್ತು ಅಚ್ಚರಿಯ ಫಲಿತಾಂಶ
ಹಾಗೇ ಸಚಿವ ಸಂಪುಟ ವಿಸ್ತರಣೆಗೂ..ನನಗೆ ಪದವಿ ಸಿಗೋದಕ್ಕೂ ಸಂಬಂಧವಿಲ್ಲ. ಇದು ದೇಶ ಮಟ್ಟದ ಪಟ್ಟಿ. ಬರೀ ಕರ್ನಾಟಕದ್ದು ಅಲ್ಲ ಎಂದು ಸ್ಪಷ್ಟಪಡಿಸಿದರು.