ಬೆಂಗಳೂರು: ಈ ಜನ್ಮದಲ್ಲಂತೂ ಅಂತಹ ತಮ್ಮ ನನಗೆ ಬೇಡ. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದೂ ಬೇಡವೇ ಬೇಡ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಬಹಳ ಮುಖ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕುಮಾರಸ್ವಾಮಿ ಈ ರೀತಿ ವ್ಯಂಗ್ಯವಾಡಿದ್ದಾರೆ. ಬಿಬಿಎಂಪಿ ಕಚೇರಿಯಲ್ಲಿ ಏನು ನಡೆದಿದೆ? 710 ಕೋಟಿ ರೂ. ಬಿಡುಗಡೆ ಆಗಿರಬೇಕಲ್ಲ. ಅದಕ್ಕೆ 26 ಅಂಶಗಳ ಮೇಲೆ ತನಿಖೆ ಮಾಡುತ್ತಾರಂತೆ. ಅಣ್ಣ ಹೇಳುತ್ತಾರೆ ತಮ್ಮ ಕೇಳಬೇಕು ಎಂದು ಶಿವಕುಮಾರ್ ಹೇಳಿದ್ದಾರಲ್ಲವೆ? ಈ ಜನ್ಮದಲ್ಲಂತೂ ಅಂತಹ ತಮ್ಮ ನನಗೆ ಬೇಡ. ಮುಂದಿನ ಜನ್ಮದಲ್ಲೂ ಬೇಡ ಎಂದು ಕುಮಾರಸ್ವಾಮಿ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.