ಆಂಧ್ರಪ್ರದೇಶ: ಇಂದು ತೆಲುಗು ಚಿತ್ರರಂಗದ ಗ್ಲಾಮರಸ್ ಹಾಗೂ ಹಾಟೆಸ್ಟ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನಟಿ ನಿಧಿ ಅಗರ್ವಾಲ್ (Nidhi Agarwal), ನಟನೆಗಿಂತ ತಮ್ಮ ಬೋಲ್ಡ್ ಹೇಳಿಕೆಗಳಿಂದಲೇ ಆಗಾಗ್ಗೆ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಸಾಲು ಸಾಲು ಚಿತ್ರಗಳಲ್ಲಿ ಆಫರ್ ಗಿಟ್ಟಿಸಿಕೊಂಡು ಅಭಿನಯಿಸಿದ್ದೇ ಆದರೂ ಸಿನಿಪ್ರೇಕ್ಷಕರ ಎದುರು ನಟಿ ಅಭಿನಯದ ಚಿತ್ರಗಳು ಕಮಾಲ್ ಮಾಡುತ್ತಿಲ್ಲ ಎಂಬುದು ಸದ್ಯ ಬೇಸರದ ಸಂಗತಿ. ಇದೆಲ್ಲದರ ಮಧ್ಯೆ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿರುವ ನಿಧಿ, ನನಗೆ ಈ ರೀತಿಯ ಚಿತ್ರಗಳನ್ನು ನೋಡಲು ಒಬ್ಬಳೇ ನೋಡುವುದು ಕಷ್ಟ. ಯಾರಾದರೂ ಜತೆಗೆ ಇರಲೇಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ 'ರಾಜಾ ಸಾಬ್' ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಹರಿ ಹರ ವೀರಮಲ್ಲು' ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿರುವ ನಿಧಿ, ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿಗಳ ಜತೆ ಜಾಲತಾಣದಲ್ಲಿ ಸಮಯ ಕಳೆದಿದ್ದಾರೆ. ನಿಮಗೆ ಕೇಳಬೇಕು ಅನಿಸಿದ ಪ್ರಶ್ನೆಗಳನ್ನು ನೇರವಾಗಿ ಕೇಳಿ ಎಂದಿದ್ದರು. ಈ ಸಂದರ್ಭದಲ್ಲಿ ನೆಟ್ಟಿಗರ ಹಲವು ಪ್ರಶ್ನೆಗಳಿಗೆ ನಟಿ ಮುಕ್ತವಾಗಿ ಉತ್ತರಿಸಿದ್ದಾರೆ.
ನಟಿಯ ಪ್ರಶ್ನಾವಳಿಗಳ ಕರೆಗೆ ಪ್ರತಿಕ್ರಿಯಿಸಿದ ಓರ್ವ ಅಭಿಮಾನಿ, ನೀವು ಹಾರರ್ ಚಿತ್ರಗಳನ್ನು ಒಬ್ಬರೇ ನೋಡ್ತೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ನಿಧಿ, "ಇಲ್ಲ ನನಗೆ ಒಬ್ಬಳೇ ನೋಡುವುದು ಎಂದರೆ ಆಗುವುದಿಲ್ಲ. ಬಹಳ ಭಯವಾಗುತ್ತದೆ. ನನ್ನೊಂದಿಗೆ ಯಾರಾದರೂ ಇದ್ದಾರೆ ಮಾತ್ರ ಅಂತಹ ಚಿತ್ರಗಳನ್ನು ನೋಡಲು ಸಾಧ್ಯ" ಎಂದು ಹೇಳಿದ್ದಾರೆ. ಕಳೆದ ಸಿನಿಮಾಗಳಲ್ಲಿ ಅಷ್ಟಾಗಿ ಸದ್ದು ಮಾಡದ ನಿಧಿ ಅರ್ಗವಾಲ್ ಮುಂಬರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಯಶಸ್ಸು ಕಾಣಲಿದ್ದಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).