ನವದೆಹಲಿ: ಮೊನ್ನೆಯಷ್ಟೇ ಮನ್ ಕೀ ಬಾತ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ 4ಗಂಟೆಗೆ ಮತ್ತೊಮ್ಮೆ ಮಾತನಾಡಲಿದ್ದಾರೆ.
ಅನ್ ಲಾಕ್-2, ಕರೊನಾ ವಿಪರೀತ ಹೆಚ್ಚಳ, ಭಾರತ-ಚೀನಾ ಸಂಘರ್ಷದಂತಹ ಹತ್ತು ಹಲವು ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿರುವ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಇವತ್ತಿನ ಭಾಷಣ ತುಂಬ ಕುತೂಹಲ ಮೂಡಿಸಿದೆ.
ಅದರಲ್ಲೂ ಗೃಹ ಸಚಿವ ಅಮಿತ್ ಷಾ ಅವರು ಮಾಡಿರುವ ಟ್ವೀಟ್ವೊಂದು ಕುತೂಹಲ ಇನ್ನಷ್ಟು ಕೆರಳಲು ಕಾರಣವಾಗಿದೆ. ಇಂದು ಸಂಜೆ 4ಗಂಟೆಗೆ ಪ್ರಧಾನಿಯವರ ಭಾಷಣವನ್ನು ಯಾರೂ ತಪ್ಪಿಸಿಕೊಳ್ಳಬೇಡಿ. ತುಂಬ ಪ್ರಮುಖ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)