ನ್ಯೂಸ್

70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ! ಹೀಗ್ಯಾಕಂದ್ರು Narendra Modi?

ನವದೆಹಲಿ: ದೆಹಲಿ ಮತ್ತು ಪಶ್ಚಿಮ ಬಂಗಾಳದ ವೃದ್ಧರಿಗೆ 'ಸೇವೆ ಮಾಡಲು' ಸಾಧ್ಯವಾಗುತ್ತಿಲ್ಲ, ಹೀಗಾಗಿ ನಾನು ನಿಮ್ಮ ಬಳಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ದೆಹಲಿಯಲ್ಲಿ ಇಂದು (ಆ.29) ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ( AB-PMJAY ) ಆಡಿಯಲ್ಲಿ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ರಕ್ಷಣೆ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೆಹಲಿ ಮತ್ತು ಬಂಗಾಳ ರಾಜ್ಯಗಳು ರಾಜಕೀಯ ಕಾರಣಗಳಿಂದಾಗಿ ತಮ್ಮ ರಾಜ್ಯಗಳಲ್ಲಿ ಈ ಯೋಜನೆ ಜಾರಿ ಗೊಳಿಸುತ್ತಿಲ್ಲ. ಇವರ ರಾಜಕಾರಣದಿಂದ ಹಿರಿಯ ನಾಗರಿಕರನ್ನು ಈ ಯೋಜನೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಸರ್ಕಾರಗಳ ವಿರುದ್ಧ ಮೋದಿ ಗುಡುಗಿದರು.

ನಿಮ್ಮ ರಾಜಕೀಯ ಹಿತಾಸಕ್ತಿ ಕಾರಣಗಳಿಂದಾಗಿ, ನಿಮ್ಮ ಸ್ವಂತ ರಾಜ್ಯದ ಹಿರಿಯ ನಾಗರಿಕರ ಮತ್ತು ರೋಗಿಗಳ ಮೇಲೆ ದಬ್ಬಾಳಿಕೆ ಪ್ರವೃತ್ತಿಯೂ ಮಾನವೀಯ ಧೋರಣೆಗೆ ವಿರೋಧವಾಗಿದೆ. ನಾನು ದೇಶದ ಜನತೆಗೆ ಸೇವೆ ಮಾಡಬಹುದು. ಆದರೆ, ರಾಜಕೀಯ ವಿರೋಧದಿಂದಾಗಿ ದೆಹಲಿ ಮತ್ತು ಬಂಗಾಳ ವೃದ್ಧರಿಗೆ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿಮ್ಮ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

6 ಕೋಟಿ ನಾಗರಿಕರಿಗೆ ಪ್ರಯೋಜನೆ

ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಹೊರತು ಪಡಿಸಿ, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ದೇಶದ 4.5 ಕೋಟಿ ಕುಟುಂಬಗಳಲ್ಲಿ ಅಂದಾಜು 6 ಕೋಟಿ ನಾಗರಿಕರು ಪ್ರಯೋಜನೆ ಪಡೆಯಲಿದ್ದಾರೆ. ಅಲ್ಲದೆ, PMJAY ಯೋಜನೆಯಡಿ 7.73 ಕೋಟಿ ಮಂದಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡಿದ್ದು, ಶೇ.49 ರಷ್ಟು ಮಹಿಳಾ ಫಲಾನುಭವಿಗಳನ್ನು ಇದು ಒಳಗೊಂಡಿದೆ. ಒಂದು ಲಕ್ಷ ಕೋಟಿಗೂ ಅಧಿಕ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.