ನ್ಯೂಸ್

2019ರಲ್ಲಿ ಎಚ್​.ಡಿ ದೇವೇಗೌಡರನ್ನು ಸೋಲಿಸಿದ್ದು ನಾನೇ, ಅನುಮಾನ ಬೇಡ: ಸಚಿವ ರಾಜಣ್ಣ

ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದ್ದಕ್ಕೆ ಕ್ಷೇತ್ರದ ಮತದಾರರಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಯ ಧನ್ಯವಾದ ಜೊತೆಗೆ ಅಭಿನಂದನೆ ಸಲ್ಲಿಸಿದರು.

ಸಕಲೇಶಪುರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಬಸವೇಶ್ವರ ಪುತ್ಥಳಿ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತುಮಕೂರಿನಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ನಾನು ಹಾಸನ ಜಿಲ್ಲಾ ಉಸ್ತುವಾರಿ, ಡಾ.ಜಿ. ಪರಮೇಶ್ವರ್ ತುಮಕೂರು ಉಸ್ತುವಾರಿ ಸಚಿವರು. ನಾವಿಬ್ಬರೂ ತುಮಕೂರಿನ ಮಂತ್ರಿಗಳು ಎಂದರು.

ನನಗೆ ಹಾಸನದ ಚುನಾವಣೆ ಕೊಟ್ಟಿದ್ದರು, ಈ ಜಿಲ್ಲೆಯ ಚುನಾವಣೆ ಬಗ್ಗೆ ನಾನು ಹೆಚ್ಚಿನ ರೀತಿಯ ಒತ್ತುಕೊಟ್ಟೆ. ತುಮಕೂರು ಚುನಾವಣೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ಆದರೆ ನನ್ನ ಸ್ವಕ್ಷೇತ್ರ ಮಧುಗಿರಿಗೆ ನಾನು ಸೀಮಿತವಾಗಿದ್ದೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದಿದ್ದರೆ ಹಾಸನಕ್ಕೆ ಬರಲ್ಲ ಅಂತ ಹೇಳಿದ್ದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಜಾತಿ, ವರ್ಗದವರು ಪಕ್ಷಾತೀತವಾಗಿ ಮತ ಹಾಕಿದ್ದಾರೆ. ದಿ. ಜಿ. ಪುಟ್ಟಸ್ವಾಮಿಗೌಡ ಅವರ ಹೆಸರಿನ ಆಧಾರದ ಮೇಲೆ ಹೆಚ್ಚಿನ ಬಹುಮತ ಬರಲು ಸಾಧ್ಯವಾಗಿದೆ ಎಂದು ಸಚಿವರು, ಈ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ ಎಂದು ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ದೇವೇಗೌಡರನ್ನು ಸೋಲಿಸಿದ್ದು ನಾನೇ

ನಾನು ಗೆಲ್ಲಿಸಿದ್ದೀನಿ ಅಂತ ಹೇಳಿದ್ರೆ, ಅದು ದುರಂಹಕಾರದ ಮಾತಾಗುತ್ತೆ, ದೇವೇಗೌಡರನ್ನು ಸೋಲಿಸಿದ್ದು ನಾನೇ, ಅದರಲ್ಲಿ ಅನುಮಾನ ಏನೂ ಇಲ್ಲ. ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಎರಡು ಸಾವಿರ ಓಟು ಇರಲಿಲ್ಲ, ನಾನು ಅವರಿಗೆ ಎಂಭತ್ತು ಸಾವಿರ ಓಟು ಕೊಡಿಸಿದ್ದೆ ಎಂದರು. ಅದರಿಂದ ಅವರು ಸೋತರು, ದೇವೇಗೌಡರು ಸೋಲಲು ನಾನೇ ಕಾರಣ, ನಾನೇ ಸೋಲಿಸಿದ್ದು ಅದರಲ್ಲಿ ಅನುಮಾನ ಏನಿಲ್ಲ. ಇದನ್ನು ತುಮಕೂರಿನಲ್ಲಿ ನಡೆದ ಅನೇಕ ಸಭೆಗಳಲ್ಲಿ ನಾನು ಹೇಳಿದ್ದೀನಿ. ದೇವೇಗೌಡರು ತುಮಕೂರಿಗೆ ಬಂದು ನನ್ನನ್ನು ಸೋಲಿಸಿ ಎಂದು ಎದೆ ಬಡಿದುಕೊಂಡು ಕಣ್ಣೀರಿಟ್ಟರು. ಈ ವಿಚಾರದಲ್ಲಿ ಮುಚ್ಚು ಮರೆ ಮಾಡುವ ಅವಶ್ಯಕತೆ ನನಗೇನಿಲ್ಲ ಎಂದು ಹೇಳಿದರು.