Soldier: ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ ಘಟನೆ ಜಲಗಾಂವ್‌ನ ಪಚೋರಾದಲ್ಲಿ ನಡೆದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆ ರಜೆಯಲ್ಲಿರುವ ತನ್ನ ಎಲ್ಲಾ ಸಿಬ್ಬಂದಿಗಳನ್ನು ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿತ್ತು. ಹೀಗಾಗಿ ರಜೆಯಲ್ಲಿರುವ ಎಲ್ಲಾ ಯೋಧರು ಊರಿಂದ ಹಿಂತಿರುಗುತ್ತಿದ್ದಾರೆ. ತಮ್ಮ ಕುಟುಂಬದ ಜೊತೆ ಸ್ವಲ್ಪ ಸಮಯ ಕಳೆಯಲು ಬಂದಿದ್ದ ಯೋಧರು ಈಗ ಅರ್ಧದಲ್ಲಿಯೇ ಹೋಗುತ್ತಿರುವುದು ಅವರ ವೈಯಕ್ತಿಕ ಜೀವನಕ್ಕಿಂತ ರಾಷ್ಟ್ರೀಯ ಕರ್ತವ್ಯವೇ ಮುಖ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ನಾಗರಿಕರೇ ಟಾರ್ಗೆಟ್! ಭಾರತದ ಎಸ್-400 ಕ್ಷಿಪಣಿ ವ್ಯವಸ್ಥೆ ನಾಶ ಶುದ್ಧ ಸುಳ್ಳು: ಭಾರತೀಯ ಸೇನೆ | MEA Press Conference
ಜಲಗಾಂವ್‌ನ ಪಚೋರಾ ತಾಲ್ಲೂಕಿನ ಪುಂಗಾಂವ್‌ನ ಸೈನ್ಯದ ಸೈನಿಕ ಮನೋಜ್ ಜ್ಞಾನೇಶ್ವರ ಪಾಟೀಲ್, ಮೇ 5 (ಸೋಮವಾರ)ದಂದು ವಿವಾಹವಾಗಿದ್ದರು. ಮಂಗಳವಾರ ಯುದ್ಧದಂತಹ ಪರಿಸ್ಥಿತಿಯಲ್ಲಿ, ತಕ್ಷಣ ಅವರ ಪ್ರಧಾನ ಕಚೇರಿಯಿಂದ ಕರ್ತವ್ಯಕ್ಕೆ ಬರಲು ಆದೇಶ ಬಂದ ನಂತರ ಯೋಧ ಮನೋಜ್ ಜ್ಞಾನೇಶ್ವರ ಪಾಟೀಲ್ ಮೇ 8 (ಗುರುವಾರ)ಕ್ಕೆ ಹಿಂತಿರುಗಿದ್ದಾರೆ.
ಮದುವೆಯಾದ ಮೂರನೇ ದಿನಕ್ಕೆ ಮಗನನ್ನು ಸೇನೆಗೆ ಕಳುಹಿಸಬೇಕಲ್ಲಾ ಎಂದು ಪೋಷಕರು ಅಳುತ್ತಾ ಮಗನನ್ನು ಬೀಳ್ಕೊಟ್ಟರು, ಜೊತೆಗೆ ಪತಿಯೊಂದಿಗೆ ಸುಂದರ ಜೀವನದ ಕನಸು ಕಂಡಿದ್ದ ಪತ್ನಿ ಯಾಮಿನಿ ಪಾಟೀಲ್ ಕಣ್ಣೀರಿಡುತ್ತಾ ಗಂಡನನ್ನು ಕಳುಹಿಸಿ ಕೊಟ್ಟಿದ್ದಾಳೆ.
ಯೋಧ ಮನೋಜ್ ಪಾಟೀಲ್ ಅರಿಶಿನ ಹಚ್ಚಿದ ಮೈಯಲ್ಲೇ, ಕೈಗೆ ಹಾಕಿದ ಮೆಹಂದಿಯೊಂದಿಗೆ ಗಡಿಗೆ ದೇಶ ಸೇವೆಗೆ ಹೊರಟು ನಿಂತಿದ್ದರು. ನವದಂಪತಿಗಳು ಹಾಗು ಅವರ ಕುಟುಂಬ, ಊರಿನವರು ಪಚೋರಾ ರೈಲು ನಿಲ್ದಾಣದಲ್ಲಿ ಬೀಳ್ಕೊಡಲು ಹಾಜರಿದ್ದರು.ಆ ಕ್ಷಣದಲ್ಲಿ ದೇಶ ಸೇವೆಗೆ ಹೋಗುತ್ತಿದ್ದ ಮಗನಿಗೆ ಅವರ ಮನೆಯವರು ಕಣ್ಣಿರಿನ ವಿದಾಯ ಹೇಳಿದರು. (ಏಜೆನ್ಸೀಸ್)