ನ್ಯೂಸ್

ನನಗ್ಯಾವ ಸಂಘಟನೆಯೂ ಇಲ್ಲ...ತೃತೀಯಲಿಂಗಿಗಳ ಪರವಾಗಿಯೂ ಹೋರಾಡಿದ್ದೇನೆ; ಪೊಲೀಸರೆದುರು ಆರುದ್ರಾ ಹೇಳಿಕೆ...

ಬೆಂಗಳೂರು: ಪರಪ್ಪನ ಅಗ್ರಹಾರ ಸೇರಿರುವ ಆರುದ್ರಾ ಪೊಲೀಸರ ಯಾವುದೇ ಪ್ರಶ್ನೆಗಳಿಗೂ ಮೊದಲು ಉತ್ತರಿಸಿಲ್ಲ. ನಾನು ಏನೇ ಹೇಳಿಕೆ ನೀಡಬೇಕಾದರೂ ಮೊದಲು ವಕೀಲರನ್ನು ಭೇಟಿಯಾಗಬೇಕು ಎಂದು ಹೇಳಿದ್ದಾಳೆ.

ವಕೀಲರನ್ನು ಭೇಟಿಯಾದ ಬಳಿಕ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದಾಗ, ಪೊಲೀಸರೇ ವಕೀಲರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ನಂತರ ಪೊಲೀಸರೆದುರು ಹೇಳಿಕೆ ನೀಡಿದ ಆರುದ್ರಾ, ನಾನು ಸಿಎಎ, ಎನ್​ಆರ್​ಸಿ ವಿರೋಧಿ ಸುಮಾರು 10 ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ. ತೃತೀಯಲಿಂಗಿಗಳ ಪರವಾಗಿಯೂ ಹೋರಾಟ ಮಾಡಿದ್ದೇನೆ. ನನಗೆ ಯಾವುದೇ ಸಂಘಟನೆ ಇಲ್ಲ ಎಂದಿದ್ದಾಳೆ.

ನಾನು ತಪ್ಪುಗಳ ವಿರುದ್ಧ ಹೋರಾಡುತ್ತೇನೆ. ವ್ಯವಸ್ಥೆ ಸರಿಯಾಗಿಲ್ಲ ಎಂದೆನಿಸಿದರೆ ಹೋರಾಟಕ್ಕೆ ಇಳಿಯುತ್ತೇನೆ. ನಾನೂ ಪ್ರತಿಭಟನೆ ಮಾಡಲು ಬಂದಿದ್ದೆ. ಅಲ್ಲಿ ಅಮೂಲ್ಯಾ ವಿರುದ್ಧ ಪ್ರತಿಭಟನೆ ಮಾಡುವವರು ಇದ್ದರು. ಅವರಿಂದ 10 ಅಡಿ ದೂರಲ್ಲಿ ಕುಳಿತು ಪ್ರತಿಭಟನೆ ಪ್ರಾರಂಭಿಸಿದೆ ಎಂದು ಹೇಳಿಕೆ ನೀಡಿದ್ದಾಳೆ.(ದಿಗ್ವಿಜಯ ನ್ಯೂಸ್​)