ನ್ಯೂಸ್

ಪ್ರಣಬ್​ ಮುಖರ್ಜಿ ನಿಧನ ದುರದೃಷ್ಟಕರ..: ಸಂತಾಪ ಸೂಚಿಸಿದ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ

ನವದೆಹಲಿ: ಹಿರಿಯ ನಾಯಕ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಗಾಂಧಿ ಕುಟುಂಬ ಸಂತಾಪ ವ್ಯಕ್ತಪಡಿಸಿದೆ. ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯವರು ಟ್ವೀಟ್​ ಮಾಡಿದ್ದಾರೆ.

ಪ್ರಣಬ್​ ಮುಖರ್ಜಿ ಅವರ ನಿಧನದಿಂದ ತುಂಬ ನೋವಾಗಿದೆ. ಕಾಂಗ್ರೆಸ್​ ಪಕ್ಷದ ಪ್ರಮುಖ ನಾಯಕರಾಗಿದ್ದರು. ಅವರು ಸಹಾನುಭೂತಿ, ದೃಢತೆ, ಸಮಗ್ರತಾ ಭಾವವುಳ್ಳವರಾಗಿದ್ದರು. ಸದಾ ನೆನಪಲ್ಲಿ ಉಳಿಯುತ್ತಾರೆ ಎಂದು ಸೋನಿಯಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಹುಲ್​ ಗಾಂಧಿಯವರೂ ಕೂಡ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಣಬ್ ಮುಖರ್ಜಿಯವರ ಸಾವು ದುರದೃಷ್ಟಕರ. ಈ ಸುದ್ದಿಯಿಂದ ಇಡೀ ದೇಶ ದುಃಖದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ...ದೇಶದ ಜನತೆಯೊಂದಿಗೆ ಸೇರಿ ನಾನೂ ಪ್ರಣಬ್​ ಮುಖರ್ಜಿಯವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)