ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ನಾನು ಆರ್‌ಎಸ್‌ಎಸ್ ಏಜೆಂಟ್, ಏನೀಗ?

ಕಿರುವಾರ ಎಸ್.ಸುದರ್ಶನ್

ಕೋಲಾರ: ಇಲ್ಲಿ ಯಾರು ಆರ್‌ಎಸ್‌ಎಸ್ ಏಜೆಂಟರಿಲ್ಲ. ಅಂತವರು ಯಾರು ಎಂಬುದನ್ನು ಮುಬಾರಕ್ ಸಾಬೀತುಪಡಿಸಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಮುಬಾರಕ್, 40-50 ಕುಟುಂಬಗಳನ್ನು ನಾಶ ಮಾಡಿದ್ದಾನೆ, ಆತನೊಬ್ಬ ತಾಲಿಬಾನ್ ಏಜೆಂಟ್ ಎಂದು ಜರಿದರು.
ಹೌದು, ನಾನು ಆರ್‌ಎಸ್‌ಎಸ್ ಏಜೆಂಟ್, ಏನೀಗ. ನಾನು ನಗರಸಭೆ ಸದಸ್ಯರ ಸಭೆಯನ್ನು ಮನೆ, ಗೆಸ್ಟ್ ಹೌಸ್, ತೋಟದ ಮನೆಯಲ್ಲಿ ಬೇಕಾದರೆ ಕರೆಯುತ್ತೇನೆ. ಆತ ಯಾರು ನನ್ನ ಕೇಳುವುದಕ್ಕೆ ಎಂದು ಪ್ರಶ್ನಿಸಿದರು.
ನಿನ್ನ ಸಭೆಗೆ ಕರೆದಿಲ್ಲ, ನಿನ್ನ ಮೇಲೆ ಎಷ್ಟು ಪ್ರಕರಣಗಳಿವೆ. ನಿನ್ನನ್ನು ಅಧ್ಯಕ್ಷರನ್ನಾಗಿ ಮಾಡಲು ನಾನು ಮೂರ್ಖನಲ್ಲ ಎಂದು ಕಿಡಿಕಾರಿದರು.
ಶೀಘ್ರ ಸಮಸ್ಯೆಗೆ ಮುಕ್ತಿ:
ನಗರಸಭೆಯಲ್ಲಿ ಪರಿಸ್ಥಿತಿ ಸರಿಪಡಿಸಬೇಕು ಎಂಬ ಉದ್ದೇಶದಿಂದ ಒಳ್ಳೆಯವರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇನ್ನು ಮುಂದೆ ಹಂತಹಂತವಾಗಿ ನಗರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು, ಏನೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಸದ್ಯಕ್ಕೆ ಆಯುಕ್ತರ ಹುದ್ದೆ ಖಾಲಿಯಿದ್ದು, ಒಳ್ಳೆಯವರನ್ನು ನೇಮಕ ಮಾಡಲು ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.