ನ್ಯೂಸ್

'ನನಗೂ ಕೆಮ್ಮು ಶುರುವಾಗಿದೆ...ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವಾಗ ಆಗಾಗ ಕೆಮ್ಮಿದ್ದೇನೆ..': ಸಚಿವ ಮಾದುಸ್ವಾಮಿ

ಹಾಸನ: ಚಿಕ್ಕಬಳ್ಳಾಪುರದ ವೃದ್ಧನೋರ್ವ ಕರೊನಾ ವೈರಸ್​ನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಗೇ ಹಾಸನದ ಮಹಿಳೆಯೋರ್ವರು ಜ್ವರದಿಂದ ಸಾವನ್ನಪ್ಪಿದ್ದಾರೆ. ಈ ಮಹಿಳೆಗೂ ಕರೊನಾ ತಗುಲಿತ್ತಾ ಎಂಬ ಅನುಮಾನ ವ್ಯಕ್ತವಾದ ಬೆನ್ನಲ್ಲೇ ಅದಕ್ಕೆ ಸಚಿವ ಮಾದುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲ ಕಾಯಿಲೆಯೂ ಕರೊನಾ ಅಲ್ಲ. ಮಹಿಳೆಗೆ ಇದ್ದುದು ಕರೊನಾ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನೂ ಕೂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವಾಗ ಆಗಾಗ ಕೆಮ್ಮುತ್ತಿದ್ದೆ. ಹಾಗಂತ ಅದು ಕೊವಿಡ್​ ಎಂದು ತೀರ್ಮಾನ ಮಾಡಬಾರದು ಎಂದರು.(ಏಜೆನ್ಸೀಸ್​)