ನ್ಯೂಸ್

ಕಾರು ಶೋರೂಮ್​ನ ಸಿಬ್ಬಂದಿ ಸ್ಥಾನ ಪಡೆಯಿತು ಬೀದಿನಾಯಿ...! ಎಲ್ಲಿ, ಹೇಗೆ?

ಇದು ಕಾರು ಶೋರೂಂ- ಶ್ವಾನದ ಬಾಂಧವ್ಯಗಾಥೆ...! ಕಂಪನಿಯ ಸಿಬ್ಬಂದಿಯಾಗಿ ಸ್ಥಾನ ಪಡೆದ ರೋಚಕ ಕಹಾನಿ.

ಕರೊನಾ ಸಮಯದಲ್ಲಿ ಉದ್ಯೋಗ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಅಂಥದ್ದರಲ್ಲಿ, ಶ್ವಾನವೊಂದು ಉದ್ಯೋಗ ಗಿಟ್ಟಿಸಿಕೊಂಡಿದೆ ಎಂದರೆ ಅಚ್ಚರಿಯೇ ಸರಿ.

ಹೌದು... ಇದು ಕಾರು ಶೋ ರೂಂ ಹಾಗೂ ಕಾರು ಶೋರೂಮ್​ನ ಬಾಂಧವ್ಯಗಾಥೆ. ಬ್ರೆಜಿಲ್​ನ ಎಸ್ಪಿರೆಟೋ ಸ್ಯಾಂಟೋದ ಸೆರ್ರಾ ಎಂಬಲ್ಲಿರುವ ಹುಂಡೈ ಕಾರು ಶೋರೂಮ್​ ತನ್ನ ಪ್ರಾಣಿಪ್ರೇಮಕ್ಕೆ ಭಾರಿ ಮೆಚ್ಚುಗೆ ಪಡೆದಿದೆ.

ಸದಾ ಶೋರೂಂ ಸುತ್ತಲೂ ಠಳಾಯಿಸುತ್ತಿದ್ದ ಬೀದಿನಾಯಿಯನ್ನು ದತ್ತು ಪಡೆದಿದ್ದಲ್ಲದೇ, ಅದಕ್ಕೆ ಟಸ್ಕಾನ್​ ಪ್ರೈಮ್ ಎಂಬ ಹೆಸರನ್ನು ನೀಡಿದ್ದರೆ, ಅಷ್ಟೇ ಆಗಿದ್ದರೆ, ವಿಶೇಷ ಇರುತ್ತಿರಲಿಲ್ಲವೇನೋ? ಅದಕ್ಕೆ ಶೋರೂಮ್​ನಲ್ಲಿ ಉದ್ಯೋಗ ಕಲ್ಪಿಸಿದ್ದಾರೆ. ಕಾರಿನ ಸೇಲ್ಸ್​ಮನ್​ ಹುದ್ದೆಯನ್ನೂ ನೀಡಿದ್ದಾರೆ. ಐಡಿ ಕಾರ್ಡ್​ಅನ್ನೂ ಅದರ ಕೊರಳಿಗೆ ನೇತು ಹಾಕಿದ್ದಾರೆ.

ಶ್ವಾನ ಶೋರೂಮ್​ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಂಪನಿಯವರು ಹೇಳಿಕೊಂಡಿದ್ದಾರೆ. ಅದೇನೇ ಇರಲಿ, ಇವರ ಪ್ರಾಣಿಪ್ರೀತಿಗೆ ನೆಟ್ಟಿಗರಂತೂ ಭಾರಿ ಫಿದಾ ಆಗಿದ್ದಾರೆ. ಅತ್ಯಂತ ಮಾನವೀಯ ನಡೆಯಿದು ಎಂದು ಶ್ಲಾಘಿಸಿದ್ದಾರೆ.