ಹೈದರಾಬಾದ್: ಗಂಡನ ಎರಡನೇ ಪತ್ನಿಯ ಮಕ್ಕಳಿಬ್ಬರನ್ನು ಕೊಲೆ ಮಾಡಿದ ಬಳಿಕ ವಿಚ್ಛೇದಿತ ಮೊದಲ ಪತ್ನಿ ನೇಣಿಗೆ ಶರಣಾಗಿರುವನ ಘಟನೆ ಹೈದರಾಬಾದಿನ ನಲ್ಗೊಂಡ ಪಟ್ಟಣದ ಜುಬಿಲಿ ಹಿಲ್ಸ್ ಬಳಿ ಶುಕ್ರವಾರ ನಡೆದಿದೆ.
ಮೇಕಲಾ ಪ್ರದೀಪ್ ಎಂಬಾತನ ಮೊಲದ ಪತ್ನಿ ಪ್ರಸನ್ನ ರಾಣಿ ಎಂಬಾಕೆ ಮಕ್ಕಳಿಬ್ಬರನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾಳೆ. ಪ್ರದೀಪ್ ಮತ್ತು ರಾಣಿಯ ನಡುವೆ ಆಸ್ತಿ ಹಂಚಿಕೆ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತೆಂದು ತಿಳಿದುಬಂದಿದೆ. ಹೀಗಾಗಿ ಪ್ರದೀಪ್, ರಾಣಿಗೆ ಡಿವೋರ್ಸ್ ನೀಡಿ ಎರಡನೇ ಮದುವೆಯಾಗಿದ್ದ.
ಎರಡನೇ ಮದುವೆಯಾಗಿದ್ದರ ಸೇಡಿಗಾಗಿ ಎರಡನೇ ಪತ್ನಿಯ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿ ರಾಣಿ ಪ್ರಾಣ ಕಳೆದುಕೊಂಡಿದ್ದಾಳೆ. ಗಂಡ-ಹೆಂಡತಿಯ ಜಗಳದಲ್ಲಿ ಮಕ್ಕಳಿಬ್ಬರು ಕೊಲೆಯಾಗಿರುವುದು ದುರ್ದೈವ ಸಂಗತಿಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)