ಹೈದರಾಬಾದ್: ಪೊಲೀಸರಿಂದ ದೌರ್ಜನ್ಯ ಆಗಿದೆ ಎಂದು ಆರೋಪಿಸಿದ ಕಳ್ಳನೋರ್ವ, ಪೊಲೀಸ್ ಠಾಣೆಯೊಳಗೆ ನುಗ್ಗಿ ಏಕಾಏಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್ನ ಚಂದ್ರಯಾಂಗುಟ್ಟಾ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆಯೊಳಗೆ ಈ ವ್ಯಕ್ತಿ ಬೆಂಕಿ ಹಚ್ಚಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲಿ ಹಿಡಿದು ಠಾಣೆಯೊಳಗೆ ಪ್ರವೇಶಿಸಿದ ಈತ ಅದನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಅದಾದ ಬಳಿಕ ಒಂದು ನಿಮಿಷವೂ ಠಾಣೆಯಲ್ಲಿ ನಿಲ್ಲದೆ, ಹೊರಗೆ ಓಡಿ ಹೋಗಿದ್ದಾನೆ. ಆತನನ್ನು ಕಾಪಾಡಲು ಪೊಲೀಸ್ ಅಧಿಕಾರಿಯೋರ್ವ ಹಿಂದೆಯೇ ಓಡಿದ್ದಾರೆ. ಅದನ್ನು ನೋಡಿದ ಸಾರ್ವಜನಿಕರು ತೀವ್ರ ಭಯಭೀತರಾಗಿ, ಇಡೀ ರಸ್ತೆಯಲ್ಲಿ ಒಂದು ಕ್ಷಣ ಆತಂಕ ಮನೆಮಾಡಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ರಾತ್ರಿ 9 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಈ ವ್ಯಕ್ತಿಯ ಹೆಸರು ಶಬ್ಬೀರ್. ಮೊಬೈಲ್ ಕಳವು ಮಾಡಿದ ಆರೋಪ ಇವನ ಮೇಲಿದೆ. ಸೋಮವಾರ ಸಂಜೆ ಇವನನ್ನು ಠಾಣೆಗೆ ಕರೆತಂದು, ಅವನ ಬಳಿಯಿದ್ದ ಮೊಬೈಲ್ನ್ನು ವಶಪಡಿಸಿಕೊಳ್ಳಲಾಗಿತ್ತು. ಹಾಗೇ ಪ್ರಕರಣವನ್ನೂ ದಾಖಲಿಸಲಾಯಿತು. ಇದನ್ನೂ ಓದಿ: ಸುಶಾಂತ್ನನ್ನು ಕೊಲೆ ಮಾಡಿದ್ದು ದೀಪೇಶ್!?; ಪ್ಯಾರಾನಾರ್ಮಲ್ ತಜ್ಞನ ಮಾತುಕತೆಯಲ್ಲಿಯೇ ಇತ್ತು ಉತ್ತರ!
ಆದರೆ ಶಬ್ಬೀರ್ ಆ ಫೋನ್ ತನ್ನದೇ ಎಂದು ವಾದಿಸಿದ. ಪೊಲೀಸರಿಗೆ ಎದುರು ಮಾತನಾಡಲು ಶುರುಮಾಡಿದೆ. ಆದರೂ ಅವನಿಗೆ ಫೋನ್ ಹಿಂದಿರುಗಿಸಲಿಲ್ಲ. ಆಗ ಶಬ್ಬೀರ್ ಫೂಲ್ ಬಾಘ್ನಲ್ಲಿರುವ ತನ್ನ ಮನೆಗೆ ಹೋಗಿ, ಪೆಟ್ರೋಲ್ ಬಾಟಲಿಯೊಂದಿಗೆ ಮತ್ತೆ ಠಾಣೆಗೆ ಬಂದು ಬೆಂಕಿಹಚ್ಚಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರ 78 ಮಂದಿಗೆ ಸೋಂಕು : ಈವರೆಗೆ 411 ಮಂದಿ ಗುಣಮುಖ
ಶಬ್ಬೀರ್ ಹೀಗೆ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿರುತ್ತಿದ್ದ. ಕೆಲವೊಮ್ಮೆ ಜೈಲಿಗೆ ಹಾಕಲಾಗಿದೆ. ಮತ್ತೂ ಹಲವು ಬಾರಿ ಎಚ್ಚರಿಕೆ ಕೊಟ್ಟು ಕಳಿಸಲಾಗಿತ್ತು. ಬೆಂಕಿಯಲ್ಲಿ ಉರಿಯುತ್ತಿದ್ದ ಅವನನ್ನು ರಕ್ಷಿಸಿ, ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಅವನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೆಬಲ್ಗೆ ಕೂಡ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಐ ಶಿವ ತೇಜ್ ತಿಳಿಸಿದ್ದಾರೆ.(ಏಜೆನ್ಸೀಸ್)