ಹೈದರಾಬಾದ್ : ಹೈದರಾಬಾದ್ನ ವ್ಯಕ್ತಿಯೊಬ್ಬರು ದೀಪಾವಳಿ ಆಚರಣೆಯನ್ನು ನಗರದ ವಿತರಣಾ ಸಿಬ್ಬಂದಿಯೊಂದಿಗೆ ( Delivery Agents ) ಆಚರಿಸುವ ಸಲುವಾಗಿ ಸ್ವಿಗ್ಗಿ, ಬ್ಲಿಂಕಿಟ್, ಬಿಗ್‌ಬಾಸ್ಕೆಟ್ ಮತ್ತು ಜೆಪ್ಟೊದಂತಹ ವೇದಿಕೆಗಳಿಂದ ಸಿಹಿತಿಂಡಿಗಳ ಪೆಟ್ಟಿಗೆಗಳನ್ನು ಆರ್ಡ್ರ್ ಮಾಡಿ ಅವರಿಗೆ ಹಿಂತಿರುಗಿಸಿ ದೀಪಾವಳಿ ಶುಭಾಷಯಗಳು ತಿಳಿಸುತ್ತಿರುವ ವಿಡಿಯೋ ಸಧ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಡಿಜಿಟಲ್ ಸೃಷ್ಟಿಕರ್ತ ಗುಂಡೇಟಿ ಮಹೇಂದರ್ ರೆಡ್ಡಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದೀಪಾವಳಿ ಹಬ್ಬದ ದಿನದಂದು ವಿತರಣಾ ಪಾಲುದಾರರಿಗೆ ಸಿಹಿಯನ್ನು ಹಂಚುತ್ತಾ ದೀಪಾವಳಿ ಶುಭಾಷಯಗಳನ್ನು ತಿಳಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಇದನ್ನೂ ಓದಿ: ದೀಪೋತ್ಸವದ ಬಗ್ಗೆ ಹೇಳಿಕೆ; ಅಖಿಲೇಶ್ ಯಾದವ್ ಸನಾತನಿಗಳ ಶತ್ರು ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್| Giriraj Singh
ಅಂದಹಾಗೇ, ನಾವು ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ ಮತ್ತು ಬಿಗ್ಬಾಸ್ಕೆಟ್ನಿಂದ ದೀಪಾವಳಿಗೆ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ ಮತ್ತು ಅವುಗಳನ್ನು ತಂದ ವಿತರಣಾ ಪಾಲುದಾರರಿಗೆ ನೀಡಿದ್ದೇವೆ ಅವರ ಸಂತೋಷ ಕ್ಷಣಗಳನ್ನು ನೋಡಿ ಖುಷಿ ಪಡುತ್ತಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ದೀಪಾವಳಿಯಂದು ವಿತರಣಾದಾರರ ನಗುವನ್ನು ಸಿಹಿಗೊಳಿಸುವ ಸಲುವಾಗಿ ನಾವು ನಿರ್ಧರಿಸಿದ್ದು, ವಿಭಿನ್ನ ಅಪ್ಲಿಕೇಶನ್ಗಳಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ ಎಂದು ರೆಡ್ಡಿ ಅವರು ಬರೆದಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಂತಿಮವಾಗಿ ಯಾರೋ ಒಬ್ಬರು ತಮ್ಮ ಪ್ರಯತ್ನಗಳಿಗೆ ಪ್ರತಿಫಲ ನೀಡುತ್ತಿದ್ದಾರೆ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ದೀಪಾವಳಿ ಮತ್ತು ಹೋಳಿಯಂದು ನಾನು ಕೂಡ ವಿತರಣಾದಾರರಿಗೆ ಸಿಹಿತಿಂಡಿಯನ್ನು ಹಂಚುತ್ತೇನೆ. ವಿತರಣಾ ವ್ಯಕ್ತಿಯ ಮುಖದಲ್ಲಿನ ನಗು ತುಂಬಾ ತೃಪ್ತಿದಾಯಕವಾಗಿತ್ತು ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)