ನ್ಯೂಸ್

ಗರ್ಲ್ ಫ್ರೆಂಡ್​​ಗಾಗಿ ಸ್ನೇಹಿತನ ಹೃದಯ ಕಿತ್ತು, ಬೆರಳು ಕತ್ತರಿಸಿ ಕೊಂದ ಯುವಕ

ಹೈದರಾಬಾದ್: ತನ್ನ ಗರ್ಲ್​​ಫ್ರೆಂಡ್​​ಗೆ ಸಂದೇಶ , ಫೋನ್​​​ ಮಾಡಿದ್ದಕ್ಕಾಗಿ 22 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನ ಹೃದಯ ಕಿತ್ತು, ಬೆರಳು ಕತ್ತರಿಸಿ ಕೊಂದಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

ನವೀನ್‌ ಸ್ನೇಹಿತನಿಂದ ಹತ್ಯೆಯಾದ ಮೃತ ದುರ್ದೈವಿ. ಕೃಷ್ಣ ಆರೋಪಿ ಯುವಕ. 'ಫೆಬ್ರವರಿ 17 ರಂದು ಇಬ್ಬರೂ ಮದ್ಯ ಸೇವಿಸಿ ಭಾರೀ ಜಗಳವಾಡಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆಯಾದ ವ್ಯಕ್ತಿಯೊಂದಿಗೆ ಆರೋಪಿ ಯುವಕನ ಗರ್ಲ್​​ಫ್ರೆಂಡ್​​ಗೆ ಪ್ರೇಮಸಂಬಂಧವಿತ್ತು. ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು, ಆದರೆ ನವೀನ್ ಮೊದಲು ಆಕೆಗೆ ಪ್ರೊಪೋಸ್ ಮಾಡಿದ್ದು ಅದನ್ನು ಆಕೆ ಒಪ್ಪಿಕೊಂಡಿದ್ದಳು. ಒಂದೆರಡು ವರ್ಷಗಳ ನಂತರ ಇಬ್ಬರೂ ಬೇರೆಯಾದರು. ಇದಾದ ನಂತರ ಹುಡುಗಿ ಕೃಷ್ಣನ ಗರ್ಲ್ ಫ್ರೆಂಡ್ ಆಗಿದ್ದಳು' ಎಂದು ಪೊಲೀಸರು ಹೇಳಿದ್ದಾರೆ.

ಲವ್ ಬ್ರೇಕ್ ಅಪ್ ಆಗಿದ್ದರೂ ನವೀನ್ ಹುಡುಗಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಸಂದೇಶ ಮತ್ತು ಕರೆಗಳನ್ನು ಮಾಡುತ್ತಿದ್ದ. ಇದು ಕೃಷ್ಣನನ್ನು ತೀವ್ರವಾಗಿ ಅಸಮಾಧಾನಗೊಳಿಸಿತು. ಹೃದಯ ಮತ್ತು ಖಾಸಗಿ ಅಂಗಗಳನ್ನು ತೆಗೆದು, ಬೆರಳುಗಳನ್ನು ಕತ್ತರಿಸಿ ಕೊಂದಿದ್ದಾನೆ. ಕೊಲೆ ಮಾಡಿದ ನಂತರ ಅದರ ಫೋಟೊ ತೆಗೆದು ಈತ ಗರ್ಲ್​​ಫ್ರೆಂಡ್​​ಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾನೆ. ನಂತರ ತಾನೇ ಶರಣಾಗಲು ಶನಿವಾರ ಪೊಲೀಸ್ ಠಾಣೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವರವಾದ ತನಿಖೆ ಕೈಗೊಂಡಿದ್ದು, ಮೃತದೇಹವನ್ನು ಶವಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.