ಹೈದ್ರಾಬಾದ್: ಕೆಲವರಿಗೆ ಬೆಳಿಗ್ಗೆ ಎದ್ದು ಒಂದು ಕಪ್ ಚಾಯ್ ಕುಡಿದು ದಿನವನ್ನು ಪ್ರಾರಂಭಿಸುತ್ತಾರೆ. ಸಂಜೆ ಒಂದು ಕಪ್ ಚಾಯ್ ಜತೆಗೆ ಮತ್ತೆ ದಿನವನ್ನು ಮುಗಿಸುವವರು ಇದ್ದಾರೆ. ಒಂದು ಹೊತ್ತಿನ ಊಟಕ್ಕೆ ಅನ್ನ ಇಲ್ಲದಿದ್ದರೂ, ಟೀ ಕುಡಿಯದೇ ಬದುಕಲಾರದ ಜನ ಈಗಿನ ಸಮಾಜದಲ್ಲಿ ಇದ್ದಾರೆ ಅಂತಹ ಟೀ ಪ್ರಿಯರು ಚಾಯ್ ಬೆಲೆ ಏರಿಕೆ ಆದರೆ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಬರಬಹುದು. ವ್ಯಾಪಾರಿಗಳು ಚಾಯ್ ಮತ್ತು ಇರಾನ್ ಚಾಯ್ ಬೆಲೆಯನ್ನು ಹೆಚ್ಚಿಸಿದ್ದಾರೆ.
ಕಾಫಿ ಪುಡಿ, ಟೀ ಪುಡಿ ದರ ಬೆಲೆ ಜಾಸ್ತಿ ಇದೆ. ಈಗ ಹಾಲಿನ ಬೆಲೆಯೂ ಜಾಸ್ತಿಯಾಗಿದೆ. ಆದ್ದರಿಂದ ಹೋಟೆಲ್ ಮಾಲೀಕರು ಕಾಫಿ, ಟೀ ಬೆಲೆ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಿದ್ದಾರೆ. ಕಾಫಿ, ಟೀ ಬೆಲೆ 10 ರೂ. ಇದ್ದರೆ, 12 ರೂ.ಗಳಿಗೆ ಹೆಚ್ಚಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬೆಲೆ ಏರಿಕೆ ಆಗಿರುವ ಸುದ್ದಿ ಕೇಳಿ ಬಂದಿರುವುದು ಹೈದ್ರಾಬಾದ್ನಲ್ಲಿಯಾಗಿದೆ.
ಹೈದರಾಬಾದಿನ ಇರಾನಿ ಚಾಯ್. ಸಾಂಪ್ರದಾಯಿಕವಾಗಿ, ಇರಾನಿ ಚಾಯ್ ಟೀ ಎಲೆಗಳನ್ನು ಒಂದು ನೀರಿನ ಪಾತ್ರೆಯಲ್ಲಿ ಇರಿಸಲಾಗಿರುತ್ತದೆ. ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲಾಗುತ್ತದೆ. ಟೀಯನ್ನು ಕೊಡುವ ಮೊದಲು, ಮಂದಗೊಳಿಸಿದ ಹಾಲನ್ನು ಕುದಿಸಿದ ಕಪ್ಪು ಚಹಾದ ಮೇಲೆ ಹಾಕಿ ಕೊಡಲಾಗುತ್ತದೆ. ಇದೇ ಹೈದರಾಬಾದ್ ಇರಾನಿ ಚಾಯ್.
ಈಗ ಒಂದು ಕಪ್ ಚಾಯ್ ಬೆಲೆ 25ರಷ್ಟು ಏರಿಕೆ ಮಾಡಲು ಹೈದ್ರಾಬಾದ್ನ ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ ನಂತರ ನಗರದ ಬಹುತೇಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕಪ್ ಮೇಲೆ 5 ರೂ. ಹೆಚ್ಚಾಗಿದೆ. ಚಹಾ ಪುಡಿ, ಅಡುಗೆ ಅನಿಲ, ಕಾರ್ಮಿಕರ ವೇತನ ಮತ್ತು ಹೋಟೆಲ್‌ನಲ್ಲಿ ದಾಖಲಾದ ಇತರ ಬೆಲೆಯಲ್ಲಿನ ಏರಿಕೆಯೇ ಈ ಹೆಚ್ಚಳಕ್ಕೆ ಕಾರಣವಾಗಿದೆ.ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಒಂದು ರೆಸ್ಟೋರೆಂಟ್ ಪ್ರತಿದಿನ ಒಂದರಿಂದ ಐದು ಚೀಲಗಳ ಚಹಾ ಪುಡಿಯನ್ನು ಬಳಸುತ್ತದೆ ಮತ್ತು ಪ್ರತಿ ಚೀಲವು 30 ಕೆಜಿ ಟೀ ಪುಡಿಯನ್ನು ಹೊಂದಿರುತ್ತದೆ. "ಅಡುಗೆ ಅನಿಲದ ಬೆಲೆಗಳು, ಕಾರ್ಮಿಕ ಶುಲ್ಕಗಳು, ಹಾಲಿನ ಬೆಲೆಗಳು ಮತ್ತು ಇತರ ವೆಚ್ಚಗಳು ಹೆಚ್ಚಾಗಿರುವುದರಿಂದ ಹೆಚ್ಚಳ ಅನಿವಾರ್ಯವಾಗಿದೆ.
ಚಾಯ್ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ಸಾಗಿಸುವ ಅನೇಕ ಜನ ಸಾಮಾನ್ಯರು ಹೈದರಾಬಾದ್‌ನಂತಹ ನಗರಗಳಲ್ಲಿ ಕಾಣಸಿಗುತ್ತಾರೆ. ಮತ್ತು ಹೆಚ್ಚಿದ ಬೆಲೆಗಳ ಪ್ರಕಾರ, ಅವರು ಚಾಯ್ ಬೆಲೆಯನ್ನು ಸಹ ಹೆಚ್ಚಿಸಬೇಕಾಗಿದೆ. ಅದರಲ್ಲೂ ಹೈದರಾಬಾದ್ ಇರಾನಿ ಚಾಯ್‌ಗೆ ಬಹಳ ಪ್ರಸಿದ್ಧವಾಗಿದೆ. ಇರಾನಿ ಚಾಯ್ ದೇಶದ ಎಲ್ಲೆಂದರಲ್ಲಿ ಸಿಗುವಷ್ಟು ರುಚಿಕರವಾಗಿ ಹೈದರಾಬಾದ್ ನಗರದಲ್ಲಿ ಸಿಗುತ್ತದೆ. ಇಂತಹ ಇರಾನಿ ಚಾಯ್ ಕುಡಿಯಬೇಕಾದರೆ 25 ರೂ. ಏನೇ ಆಗಲಿ ಬೆಲೆ ಏರಿಕೆ ಚಾಯ್ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.