ನ್ಯೂಸ್

HVFನಲ್ಲಿ ಅಪ್ರೆಂಟಿಸ್‌ಗಳಿಗೆ ಅವಕಾಶ; ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ

ಬೆಂಗಳೂರು: ಚೆನ್ನೈನ ಅವಡಿಯಲ್ಲಿರುವ ಹೆವಿ ವೆಹಿಕಲ್ಸ್ ಫ್ಯಾಕ್ಟರಿ(HVF) ಕೇಂದ್ರ ರಕ್ಷಣ ಸಚಿವಾಲಯದ ರಕ್ಷಣ ಉತ್ಪಾದನೆ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಸ್ತ್ರಸಜ್ಜಿತ ವಾಹನ ಮತ್ತು ಯುದ್ಧ ಟ್ಯಾಂಕರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿರುವ ಸಂಸ್ಥೆಯಾಗಿದೆ. ಪ್ರಸ್ತುತ ವಿವಿಧ ವಿಭಾಗಗಳಿಗೆ ಅಪ್ರೆಂಟಿಸ್‌ಗಳ ನೇಮಕಾತಿಗೆ ಮುಂದಾಗಿದೆ. ಆಸಕ್ತರು ಇಲ್ಲಿನ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು

320

ಹುದ್ದೆಗಳ ವಿವರ

ಗ್ರಾಜುಯೇಟ್ ಅಪ್ರೆಂಟಿಸ್ 110

ಟೆಕ್ನೀಷಿಯನ್(ಡಿಪ್ಲೊಮಾ)ಅಪ್ರೆಂಟಿಸ್ 110

ನಾನ್-ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್ 100

ವಿದ್ಯಾರ್ಹತೆ 

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಪ್ರೆಂಟಿಸ್ ಸ್ಥಾನಕ್ಕೆ ಅನುಗುಣವಾಗಿ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ/ಡಿಪ್ಲೊಮಾ/ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ ಸೇರಿದಂತೆ ಇತರ ಸಾಮಾನ್ಯ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್‌ಶಿಪ್ ನಿಯಮಾನುಸಾರ ವಯೋಮಿತಿ ಅನ್ವಯವಾಗಲಿದೆ.

ಸ್ಟೈಪೆಂಡ್

ಗ್ರಾಜುಯೇಟ್/ನಾನ್-ಇಂಜಿನಿಯರಿಂಗ್ ಅಪ್ರೆಂಟಿಸ್‌ಗಳಿಗೆ 9,000ರೂ., ಟೆಕ್ನೀಷಿಯನ್ ಅಪ್ರೆಂಟಿಸ್‌ಗಳಿಗೆ 8,000ರೂ. ಸ್ಟೈಪೆಂಡ್ ಗೊತ್ತುಪಡಿಸಲಾಗಿದೆ.

ಟ್ರೇನಿಂಗ್ ಅವಧಿ

ಅಪ್ರೆಂಟಿಸ್‌ಶಿಪ್ ಕಾಯ್ದೆ 1973ರ ಅನ್ವಯ ಟ್ರೇನಿಂಗ್ ಅವಧಿ 1 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಯಾರು ಅನರ್ಹರು?

ಈಗಾಗಲೇ ಅಪ್ರೆಂಟಿಸ್‌ಶಿಪ್ ಕಾಯ್ದೆ 1973ರ ಅನ್ವಯ ಯಾರೆಲ್ಲಾ ಅಪ್ರೆಂಟಿಸ್‌ಗಳಾಗಿ ಕಾರ್ಯನಿರ್ವಹಿಸಿ ಅನುಭವಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಆಯ್ಕೆ ಹೇಗೆ?

ವಿದ್ಯಾರ್ಹತೆ ಆಧಾರದ ಮೇಲೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಬಿಡುಗಡೆಗೊಳ್ಳುವುದು. ಆಯ್ಕೆಗೊಂಡ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು.

ಅರ್ಜಿ ಸಲ್ಲಿಕೆಗೆ ಅಂತಿಮ ದಿನ: 16.12.2023

ಹೆಚ್ಚಿನ ವಿವರ: ddpdoo.gov.in