ಹೂವಿನಹಡಗಲಿ : ತಾಲೂಕಿನ ಹಗರನೂರು ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ ಬೋನಿಗೆ ಸುಮಾರು 4 ವರ್ಷದ ಹೆಣ್ಣು ಚಿರತೆ ಶನಿವಾರ ಬೋನಿಗೆ ಬಿದ್ದಿದೆ.
ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಕಳೆದ ವಾರದಿಂದ ಕಾಣಿಸಿಕೊಂಡಿದ್ದ ಚಿರತೆ ಕುರಿಗಳನ್ನು ತಿಂದು ಹಾಕಿತ್ತು. ಕುರಿಗಾಯಿಗಳು ಚಿರತೆಯಿಂದ ತಮ್ಮ ಕುರಿಗಳನ್ನು ರಕ್ಷಿಸುವಂತೆ ಹಾಗೂ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿ ಕಳೆದ ಎರಡು ದಿನಗಳ ಹಿಂದೆ ಬೋನ್ ಇಟ್ಟಿದ್ದರು. ಈಗ ಚಿರತೆ ಸೇರೆಯಾಗಿದ್ದು. ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ ಎಂದು ಆರ್‌ಎಫ್‌ಒ ಉಮೇಶ್ ತಿಳಿಸಿದರು.