ನ್ಯೂಸ್

ಪತ್ನಿ ಮತ್ತು ಪುತ್ರನ ಅನೈತಿಕ ಸಂಬಂಧ ಬಯಲು; ಕುಟುಂಬಸ್ಥರ ಜತೆಗೂಡಿ ಪತ್ನಿಯ ಕೊಲೆಗೈದ ಪತಿ..!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾಂದ ಜಿಲ್ಲೆಯಲ್ಲಿ ಬೆರಳು ಮತ್ತು ತಲೆಯನ್ನ ಕತ್ತರಿಸಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಸುಮಾರು 35-40 ವರ್ಷ ವಯಸ್ಸಿನ ಮಹಿಳೆಯ ತಲೆ ಆಕೆಯ ದೇಹದಿಂದ ಸ್ವಲ್ಪ ದೂರದಲ್ಲಿ ಕಂಡು ಬಂದಿದೆ.


ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ಪ್ರಕಾರ ಮೃತದೇಹವು ಮಾಯಾದೇವಿ ಎಂಬ ಮಹಿಳಯದ್ದು ಎಂದು ತಿಳಿಸಿದ್ದಾರೆ. ಪ್ಹೆರಕರಣದ ಕುರಿತಂತೆ ಹೆಚ್ಚಿನ ತನಿಖೆ ಮಧ್ಯಪ್ರದೇಶದ ಛತ್ತರ್‌ಪುರ ನಿವಾಸಿ ರಾಮ್‌ಕುಮಾರ್ ಅಹಿರ್ವಾರ್ ಪತ್ನಿಯೇ ಮೃತ ಮಾಯಾದೇವಿ ಅನ್ನೋದು ಪೊಲೀಸರಿಗೆ ತಿಳಿದು ಬಂದಿದೆ.
ಮೃತ ಮಹಿಳೆಯ ಗುರುತು ಮರೆಮಾಚಲು ಕೇವಲ ಬೆರಳು ಕತ್ತರಿಸಿರೋದು ಮಾತ್ರವಲ್ಲ, ಆಕೆಯ ಹಲ್ಲುಗಳನ್ನು ಪುಡಿಮಾಡಲಾಗಿದೆ. ವಿಚಾರಣೆ ವೇಳೆ, ಪತಿ ರಾಮ್‌ಕುಮಾರ್, ಮಕ್ಕಳಾದ ಸೂರಜ್ ಪ್ರಕಾಶ್ ಮತ್ತು ಬ್ರಿಜೇಶ್ ಮತ್ತು ಸೋದರಳಿಯ ಉದಯ್ ಜೊತೆಗೂಡಿ ತನ್ನ ಪತ್ನಿಯನ್ನೇ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ. ರಾಮ್‌ಕುಮಾರ್​ಗೆ ಪತ್ನಿ ಮಾಯಾದೇವಿ ಎರಡನೇ ಹೆಂಡತಿ. ಪತ್ನಿ ಮತ್ತು ಪುತ್ರ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ರಾಮ್‌ಕುಮಾರ್ ಶಂಕಿಸಿದ್ದ. ಇದರಿಂದ ಕೋಪಗೊಂಡ ರಾಮ್​ಕುಮಾರ್​​ ಈ ರೀತಿ ಕುಟುಂಬಸ್ಥರ ಸಹಾಯ ಪಡೆದ ಪತ್ನಿಯ ಕೊಲೆಗೈದಿದ್ದಾನೆ.


ನಾಲ್ವರು ಆರೋಪಿಗಳು ಮಾಯಾದೇವಿಯನ್ನು ಚಮ್ರಹಾ ಗ್ರಾಮಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ, ಕೊಡಲಿಯಿಂದ ತಲೆ ಮತ್ತು ನಾಲ್ಕು ಬೆರಳುಗಳನ್ನ ಕತ್ತರಿಸಿದ್ದಾರೆ.


ಸದ್ಯ ಅಪರಾಧಕ್ಕೆ ಬಳಸಿದ್ದ ವಾಹನ ಮತ್ತು ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.