Chicken Curry: ರಾತ್ರಿ ಊಟಕ್ಕೆ ತಿನ್ನಲು ಚಿಕನ್ ಕರಿ ಮಾಡಿಲ್ಲ ಎಂಬ ಕಾರಣಕ್ಕೆ ಗಂಡ ತನ್ನ ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಹಿನ್ನೆಲೆ ಏಕಾಏಕಿ ನೆಲಕ್ಕೆ ಕುಸಿದು ಬಿದ್ದ ಆಕೆ ಮೃತಪಟ್ಟಿರುವ ವಿಚಿತ್ರ ಘಟನೆ ಒಡಿಸ್ಸಾದ ಥೆಂಕಾನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಅಲ್ಲಿನ ಇಡೀ ಪ್ರದೇಶದಲ್ಲಿ ಅಘಾತದ ಅಲೆಯನ್ನೇ ಎಬ್ಬಿಸಿದೆ.
ಇದನ್ನೂ ಓದಿ:ರಾಜ್ಯ, ಜಿಲ್ಲೆ ಹಾಗೂ ಶಾಲಾ ಹಂತದಲ್ಲಿ ಎಸ್.ಎಸ್.ಎಲ್.ಸಿ. ಟಾಪರ್ ವಿದ್ಯಾರ್ಥಿಗಳಿಗೆ ವಿದ್ಯಾದಾನ ಸಮಿತಿಯಿಂದ ಸನ್ಮಾನ
ಮೂರು ಮಕ್ಕಳ ತಾಯಿ ಕುನಿ ಪಿಂಗುವಾ(35) ಮೃತೆ. ಆಕೆಯ ಪತಿ ಜಿನಾ ಪಿಂಗುವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ನಾನು ಆರೋಗ್ಯವಾಗಿದ್ದೇನೆ.. ಶೀಘ್ರದಲ್ಲೇ ಚೇತರಿಸಿಕೊಳ್ಳುವೆ; ಅಭಿಮಾನಿಗಳಿಗೆ ನಟಿ ಅರುಣಾ ಇರಾನಿ ಸಂದೇಶ | Aruna Irani
ದಿನಾಗೂಲಿ ಕಾರ್ಮಿಕನಾಗಿದ್ದು, ಭಾನುವಾರ ಅಂಗಡಿಯಿಂದ ಚಿಕನ್ ಪೀಸ್(ಮಾಂಸ) ತಂದು, ಮನೆಯಲ್ಲಿ ಕೊಟ್ಟು ರಾತ್ರಿ ಊಟಕ್ಕೆ ಬೇಯಿಸು ಎಂದು ಪತ್ನಿ ಕುನಿ ಪಿಂಗುವಾಗೆ ಹೇಳಿ ಹೊರ ಹೋಗಿದ್ದಾನೆ. ಬಳಿಕ ತಿರುಗಿ ಮನೆಗೆ ಬಂದ ಜಿನಾ ಪಿಂಗುವಾ, ಚಿಕನ್ ಮಾಡದಿದ್ದಕ್ಕೆ ಕೋಪಗೊಂಡು ಮನಬಂದಂತೆ ಥಳಿಸಿ ಕಪಾಳಮೋಕ್ಷ ಮಾಡಿ ಸಿಟ್ಟಿನಿಂದ ಮತ್ತೆ ಹೊರ ನಡೆಸಿದ್ದಾನೆ. ಏಕಾಏಕಿ ಕೆಳಗೆ ಬಿದ್ದ ಪತ್ನಿ ಕುನಿ ಮತ್ತೆ ಮೇಲೆಳಿಲ್ಲ. ತಡರಾತ್ರಿ ಮನೆಗೆ ಬಂದ ಪತಿಗೆ ವಿಷಯ ಗೊತ್ತಾಗಿದೆ. ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಅಧಿಕಾರಿಗಳ ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)