ನ್ಯೂಸ್

ಮಂಗಳಸೂತ್ರದಿಂದಲೇ ಕುತ್ತಿಗೆ ಬಿಗಿದು ಪತ್ನಿಯ ಬರ್ಬರ ಹತ್ಯೆ: ಮದ್ವೆಯಾದ ಆರೇ ತಿಂಗಳಿಗೆ ದುರಂತ ಸಾವು

ಚೆನ್ನೈ: ಪಾಪಿ ಪತಿರಾಯನೊಬ್ಬ ಪವಿತ್ರ ಮಂಗಳ ಸೂತ್ರದಿಂದಲೇ ಕುತ್ತಿಗೆ ಬಿಗಿದು ಪತ್ನಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಚೆನ್ನೈ ಸಮೀಪದ ಅಂಬಾಥೂರ್​ನಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಪವಿತ್ರ (28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಬಳಿಕ ಆಕೆಯ ಗಂಡ ರಾಜ್​ (35) ಪರಾರಿಯಾಗಿದ್ದಾನೆ. ಪವಿತ್ರ ಜವಳಿ ಅಂಗಡಿಯಲ್ಲಿ ಸೇಲ್ಸ್​ ಗರ್ಲ್​ ಆಗಿ ಕೆಲಲ ಮಾಡುತ್ತಿದ್ದಳು. ತನ್ನ ನೆರೆಮನೆಯ ರಾಜ್​ ಜೊತೆ ಆರು ತಿಂಗಳ ಹಿಂದೆ ಮದುವೆ ಆಗಿದ್ದಳು.

ಪವಿತ್ರ ಮತ್ತು ರಾಜ್​ ಇಬ್ಬರಿಗು ಇದು ಎರಡನೇ ಮದುವೆ. ಕಳೆದ ವಾರ ಯಾವುದೋ ಮಾತಿಗೆ ಇಬ್ಬರು ಜಗಳ ಆರಂಭವಾಗಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡಿದ್ದ ರಾಜ್​, ಮಂಗಳಸೂತ್ರದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಮಗಳು ಗಂಡನೊಂದಿಗೆ ಜಗಳ ಆಡಿದ್ದಾಳೆ ಎಂಬ ಸಂಗತಿಯನ್ನು ತಿಳಿದ ಕೂಡಲೇ ಪವಿತ್ರಳ ತಾಯಿ ಮನೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ರಾಜ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)