ನ್ಯೂಸ್

ಇಬ್ಬರಲ್ಲಿ ಒಬ್ರನ್ನು ಆಯ್ಕೆ ಮಾಡ್ಕೋ ಎಂದ ಪ್ರಿಯತಮೆ! ಪತ್ನಿಯನ್ನು ಕೊಲೆ ಮಾಡಿದ ಪಾಪಿ ಗಂಡ | Uttara pradesh

Uttara pradesh: ಉತ್ತರ ಪ್ರದೇಶದ ವಿವಾಹಿತ ವ್ಯಕ್ತಿಯೊಬ್ಬಗುಟ್ಟಾಗಿ ಬೇರೆ ಯುವತಿಯೊಂದಿಗೆ ಮದುವೆಯಾಗಿ, ಈಕೆಯ ಷರತ್ತಿನ ಮೇರೆಗೆ ಮೊದಲನೇ ಹೆಂಡತಿಯನ್ನು ಕೊಂದ ಘಟನೆ ಬುಧವಾರ (ಜು.30) ನಡೆದಿದೆ.

ಅಮರಾವತಿ ಮೃತ ಗೃಹಿಣಿ ಎಂದು ಗುರುತಿಸಲಾಗಿದ್ದು, ಬದೌನ್​ನ ನಿವಾಸಿ ಆರೋಪಿ ಓಂ ಸರಣ್​ ಮೌರ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮರಾವತಿಯನ್ನು ಪತಿಯೇ ಕೊಲೆ ಮಾಡಿ ದರೋಡೆಕೊರರು ಕೊಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಬಿಂಬಿಸಿದ್ದ. ಘಟನೆ ನಡೆದ 15 ಗಂಟೆಯೊಳಗೆ ಪೊಲೀಸರು ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಏನಿದು ಘಟನೆ..?

ಎರಡನೇ ಮದುವೆ ಬಳಿಕ ಕೊಲೆ

ಮದುವೆ ಅಲಂಕಾರಿಕ ಗುತ್ತಿಗೆದಾರನಾಗಿ ಓಂಸರನ್​ ಕೆಲಸ ಮಾಡುತ್ತಿದ್ದನು. ಈತನು ಬರೇಲಿಯ ಬ್ಯೂಟಿ ಪಾರ್ಲರ್​ನ ಮಾಲೀಕಿ ಮನ್ನತ್​ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಮನ್ನತ್​ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಲು ಬೇಡಿಕೆ ಇಟ್ಟಿದ್ದರಿಂದಲೇ ಕೊಲೆ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸತ್ಯ ಬೆನ್ನಟ್ಟಿದ ಪೊಲೀಸರು

ದರೋಡೆ ಯತ್ನದ ಸಂದರ್ಭದಲ್ಲಿ ಗುಂಪೊಂದು ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಓಂ ಸರಣ್​​ ಮೌರ್ಯ ದೂರು ದಾಖಲಿಸಿದ್ದನು. ಈತನ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಆತನ ಮೊಬೈಲ್​ ಕರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನು ಕೊಲೆಯ ಮುಂಚೆ ಈತ ಮನ್ನತ್​ಗೆ ಕರೆ ಮಾಡಿರುವ ಮಾಹಿತಿ ತಿಳಿದಿದೆ. ಇನ್ನು ದಾಳಿ ಮಾಡಲು ಕಬ್ಬಿಣದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದನು. ಇನ್ನು ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿದಾಗ ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಓಂಸರನ್ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)