ನ್ಯೂಸ್

12 ಕೋಟಿ ರೂ. ಲಾಟರಿ ಗೆದ್ದು ಮಾಜಿ ಪತ್ನಿಗೆ ಫ್ಲ್ಯಾಟ್​​ ನೀಡಿದ; ಹೆಂಡತಿ ಪ್ರತಿಕ್ರಿಯೆಗೆ ಪತಿರಾಯ ಸುಸ್ತು!

ನವದೆಹಲಿ: ಈ ಪತಿರಾಯ ಬರೋಬ್ಬರಿ 12 ಕೊಟಿ ರೂ. ಲಾಟರಿಯಲ್ಲಿ ಗೆದ್ದಿದ್ದು ಈ ವಿಚಾರವನ್ನು ತನ್ನ ಹೆಂಡತಿ ಬಳಿಯಿ.ದ ಮುಚ್ಚಿಟ್ಟಿದ್ದ. ಅಷ್ಟೇ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಬದಲಾಗಿ ಈತ ಮಾಡಿದ್ದು ಏನೆಂದರೆ ತನ್ನ ಹಳೆ ಹೆಂಡತಿಗಾಗಿ ಫ್ಲಾಟ್​ ಖರೀದಿಸಿದ್ದಾನೆ!

10 ಮಿಲಿಯನ್ ಯುವಾನ್ (ರೂ 12.13 ಕೋಟಿ) ಮೌಲ್ಯದ ಲಾಟರಿ ಗೆದ್ದ ಚೀನಾದ ವ್ಯಕ್ತಿ ತನ್ನ ಹೆಂಡತಿಯಿಂದ ಗೆಲುವನ್ನು ಮರೆಮಾಚಲು ಪ್ರಯತ್ನಿಸಿದ್ದಕ್ಕಾಗಿ ಈತನಿಗೆ ಲಕ್ಷಾಂತರ ಯುವಾನ್ ಪರಿಹಾರವನ್ನು ಪಾವತಿಸಲು ಆದೇಶಿಸಲಾಗಿದೆ. ಝೌ ಹೆಸರಿನ ಈ ವ್ಯಕ್ತಿ ಎರಡು ವರ್ಷಗಳ ಹಿಂದೆ 10 ಮಿಲಿಯನ್ ಯುವಾನ್ ಮೌಲ್ಯದ ಲಾಟರಿ ಗೆದ್ದಿದ್ದ. ತೆರಿಗೆ ಕಟ್ಟಿದ ನಂತರ ಈತನ ಬಳಿ 8.43 ಮಿಲಿಯನ್ ಯುವಾನ್ (10.22 ಕೋಟಿ ರೂ.) ಉಳಿದಿತ್ತು. ಆದರೂ, ಲಾಟರಿ ಬಹುಮಾನದ ಬಗ್ಗೆ ತನ್ನ ಪತ್ನಿಗೆ ಈತ ತಿಳಲಿಸಿರಲಿಲ್ಲ.

ಬಹುಮಾನದ ಹಣವದಲ್ಲಿ ಝೌ, ತಮ್ಮ ಅಕ್ಕನಿಗೆ 2 ಮಿಲಿಯನ್ ಯುವಾನ್ (2.42 ಕೋಟಿ ರೂ.) ವರ್ಗಾಯಿಸಿದ್ದ. ಇದಾದ ಕೆಲವು ದಿನಗಳ ನಂತರ, ತನ್ನ ಮಾಜಿ ಹೆಂಡತಿಗೆ ಫ್ಲಾಟ್ ಖರೀದಿಸಲು 700,000 ಯುವಾನ್ (84.93 ಲಕ್ಷ ರೂ.) ನೀಡಿದ್ದ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಆದರೆ ಝೌನ ವರ್ತನೆಯಿಂದ ಅನುಮಾನಗೊಂಡ ಆತನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಸಂದರ್ಭ ಆಸ್ತಿಯನ್ನು ಸಮಾನವಾಗಿ ವಿಭಜನೆ ಮಾಡಿ ಝೌ ಗಳಿಸಿದ್ದ ಮೊತ್ತವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದಳು. ಝೌ, ತನ್ನ ಸಹೋದರಿ ಮತ್ತು ಮಾಜಿ ಪತ್ನಿಯೊಂದಿಗೆ ಸೇರಿಕೊಂಡು ಮುಚ್ಚಿಟ್ಟಿದ್ದ ಒಟ್ಟು 2.7 ಮಿಲಿಯನ್ ಯುವಾನ್‌ನಲ್ಲಿ ಮೂರನೇ ಎರಡರಷ್ಟು ಹಣವನ್ನು ಪಾವತಿಸಲು ಆದೇಶಿಸುವಂತೆ ಅವಳು ನ್ಯಾಯಾಲಯವನ್ನು ಕೇಳಿದಳು.

ಈ ಸುದ್ದಿ ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ತಮ್ಮ ಕಾಮೆಂಟ್​ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು "ಝೌ ಲಾಟರಿ ಟಿಕೆಟ್ ಖರೀದಿಸಲು ಸಾಮಾನ್ಯ ಆಸ್ತಿಯನ್ನು ಬಳಸಿ ಬಹುಮಾನ ಗೆದ್ದ ನಂತರ ಏಕಾಂಗಿಯಾಗಿ ಆನಂದಿಸಲು ಬಯಸಿದ್ದರು" ಎಂದು ಬರೆದಿದ್ದಾರೆ.

ಇನ್ನೊಬ್ಬರು "10 ಮಿಲಿಯನ್ ಯುವಾನ್ ಬಹುಮಾನ ಇಬ್ಬರ ನಡುವಿನ ಬಿರುಕುಗಳನ್ನು ಅಗಲಿಸಿದೆ” ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಹೆಂಡತಿಗೆ ಸಲ್ಲಿಸ ಬೇಕಾದದ್ದನ್ನು ಸಲ್ಲಿಸದಿದ್ದರೆ ದಂಡ ಬೀಳುವುದು ಖಚಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.