Murdered: ನಿರಂತರವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಪತ್ನಿಗೆ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಿಲಿಯಾನ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ರೇಖಾ(27) ಮೃತ ಗೃಹಿಣಿ. ಪತಿ ಆರೋಪಿ ಗಣೇಶ್ ಕೊಲೆಗೈದು ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಏನು..?
ಗಣೇಶ್ ಮತ್ತು ರೇಖಾ ಎಂಟು ವರ್ಷಗಳ ಕಾಲ ಮದುವೆಯಾಗಿದ್ದರು ಮತ್ತು ಇಬ್ಬರು ಮಕ್ಕಳಿದ್ದರು. ದಂಪತಿಗಳ ನಡುವೆ ಆಗಾಗ್ಗೆ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ಗಣೇಶ್ ನಿಯಮಿತವಾಗಿ ರೇಖಾ ಅವರ ಮೇಲೆ ಅತಿಯಾದ ಮೊಬೈಲ್ ಫೋನ್ ಬಳಕೆ ಆರೋಪ ಮಾಡುತ್ತಿದ್ದರು. ಈ ಹಿಂದೆ ಇದಕ್ಕೆ ಸಬಂಧಪಟ್ಟಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಗಂಡ-ಹೆಂಡತಿ ನಡುವೆ ಸಂಧಾನ ಮಾಡಿ ಕಳುಹಿಸಿದ್ದರು.
ಗಣೇಶ್ ಮನೆಗೆ ಹಿಂತಿರುಗಿ ರೇಖಾ ಜತೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದ್ದನು. ಕೋಪದ ಭರದಲ್ಲಿ ಅವನು ಅವಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)