ಸಾಂದರ್ಭಿಕ ಚಿತ್ರ 
ನ್ಯೂಸ್

ಪತ್ನಿಗೆ ವಿಡಿಯೋ ಕಾಲ್​ ಮಾಡಿ ಪ್ರಾಣಬಿಟ್ಟ ಪತಿ..!

ಕಾನ್ಪುರ್​: ಹೆಂಡತಿಗೆ ವಿಡಿಯೋ ಕಾಲ್​ ಮಾಡಿ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಇದನ್ನೂ ಓದಿ: ಇನ್ಫೋಸಿಸ್​, ವಿಪ್ರೋ ಸೇರಿ 13 ಕಂಪನಿಯ ಜಾಬ್​ ಆಫರ್​ ತಿರಸ್ಕರಿಸಿದ ಯುವತಿ! ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ

ಮೃತನನ್ನು ಸೋನು ಸಿಂಗ್​ ಎಂದು ಗುರುತಿಸಲಾಗಿದ್ದು, ಎಚ್ ಬ್ಲಾಕ್​ನ ನಿವಾಸಿಯಾಗಿದ್ದಾನೆ. ಈತ ರೈಲ್ವೆಯಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದು, ಗೋವಿಂದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೋನು ಸಿಂಗ್​ ಮತ್ತು ಆತನ ಪತ್ನಿ ಕರಿಷ್ಮಾ ದಂಪತಿಗಳಿಗೆ ಓಂ ಎಂಬ ಮಗನಿದ್ದು, ಇಬ್ಬರ ನಡುವಿನ ಜಗಳದಿಂದಾಗಿ ಆಕೆ ಕಳೆದ ಮೂರು ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಮೃತನ ಸೋದರ ಮಾವ ವಿಕ್ಕಿ ಎಂಬತಾನ ಪ್ರಕಾರ, ಸೋನು ಭಾನುವಾರ ಮಧ್ಯಾಹ್ನ 12.30 ರ ಸುಮಾರಿಗೆ ಪತ್ನಿಗೆ ವಿಡಿಯೋ ಕಾಲ್​ ಮಾಡಿದ್ದ. ಈ ವೇಳೆ ಆಕೆಗೆ ಏನಾಗುತ್ತಿದೆ ಎಂಬುದು ಅರ್ಥವಾಗುವಷ್ಟರಲ್ಲಿ ಆತ ನೇಣುಬಿಗಿದುಕೊಂಡಿದ್ದು, ಕೂಡಲೇ ಆಕೆ ಹಾಗೂ ಸಂಬಂಧಿಕರು ಆತನ ಮನೆಗೆ ತೆರಳಿದ್ದರು. ಆದರೆ ದುರದೃಷ್ಟವಶಾತ್​, ಅಷ್ಟೊತ್ತಿಗಾಗಲೇ ಸೋನು ಮೃತಪಟ್ಟಿದ್ದನು.

ಸೋನು ಕುಟುಂಬ ಸದಸ್ಯರ ಪ್ರಕಾರ, ಮದ್ಯಪಾನದ ಕಾರಣದಿಂದಾಗಿ ಆಗಾಗ್ಗೆ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದವು. ಎರಡು ದಿನಗಳ ಹಿಂದೆ, ಆತ ತನ್ನ ಹೆಂಡತಿ ಮತ್ತು ಮಗನನ್ನು ಭೇಟಿಯಾಗಲು ಹೋಗಿದ್ದನು. ಆದರೆ ಅಲ್ಲಿಂದ ಬಂದ ಮೇಲೆ ಮನಸ್ಸು ಘಾಸಿಗೊಂಡಿತ್ತು ಎಂದು ಹೇಳಿದ್ದಾರೆ.(ಏಜೆನ್ಸೀಸ್)