ನ್ಯೂಸ್

ನೀರಿನಲ್ಲಿ ಮುಳುಗಿ ಮೃತನಾದ ಪತಿ; 3 ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿದ ಮಹಿಳೆಯ ಆಕ್ರಂದನ

ಯಾದಗಿರಿ: ಕಾರು ಕಾಲುವೆಗೆ ಬಿದ್ದು ಕುಟುಂಬದವರೆಲ್ಲ ನೀರು ಪಾಲಾದರೂ..ಮೂರು ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿದ ಈ ಮಹಿಳೆಯ ಪಾಲಿಗೆ ಉಳಿದಿದ್ದು ಕಣ್ಣೀರು ಮಾತ್ರ..

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ಈ ದುರಂತ ನಡೆದಿದೆ. ಪವನ್ ಬಿರಾದಾರ್ (31) ಎಂಬುವರು ಪತ್ನಿ, ತಂದೆ-ತಾಯಿ ಹಾಗೂ ಮೂರುವರ್ಷದ ಮಗುವಿನೊಟ್ಟಿಗೆ ಜಮೀನು ನೋಡಲೆಂದು ಹೋಗಿದ್ದರು. ಆದರೆ ಕಾಲುವೆ ದಡದ ಮೇಲೆ ಕಾರನ್ನು ರಿವರ್ಸ್​ ತೆಗೆದುಕೊಳ್ಳುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಎಲ್ಲರೂ ನೀರುಪಾಲಾಗಿದ್ದರೂ ಸದ್ಯ ಪವನ್​ ಶವ ಪತ್ತೆಯಾಗಿದೆ. ಅವರ ತಂದೆ ಶರಣಗೌಡ ಬಿರಾದಾರ್, ತಾಯಿ ಜಾನಕಿ ಬಿರಾದಾರ್ ಇನ್ನೂ ಪತ್ತೆಯಾಗಿಲ್ಲ.

ಪವನ್ ಪತ್ನಿ, ಮಗುವಿನೊಂದಿಗೆ ಈಜಿ ದಡ ಸೇರಿದ್ದಾರೆ. ನಾಪತ್ತೆಯಾದ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಆಕ್ರಂದನ ಮುಗಿಲುಮುಟ್ಟಿದೆ.(ಏಜೆನ್ಸೀಸ್​)