ನ್ಯೂಸ್

ತವರು ಮನೆಯಿಂದ ಪತ್ನಿ ಬಾರದಿದ್ದಕ್ಕೆ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಗಂಡ!

ಪಟನಾ: ತವರು ಮನೆಯಿಂದ ಪತ್ನಿ ಮರಳಿ ಬರದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಬಿಹಾರದ ರಜನಿ ನಯಾನಗರದಲ್ಲಿ ಶುಕ್ರವಾರ ನಡೆದಿದೆ.

ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿಯನ್ನು ಕೃಷ್ಣ ಬಾಸುಕಿ (25) ಎಂದು ಗುರುತಿಸಲಾಗಿದೆ. ಅನಿತಾ ಎಂಬಾಕೆಯನ್ನು ಬಾಸುಕಿ ಮದುವೆಯಾಗಿದ್ದ. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ವರದಿಗಳ ಪ್ರಕಾರ ಬಾಸುಕಿ, ಪಂಜಾಬ್​ನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಬಿಹಾರದಲ್ಲಿರುವ ತಮ್ಮ ಕುಟುಂಬವನ್ನು ನೋಡಲು ಆಗಾಗ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಬಾಸುಕಿ ಪತ್ನಿ ಅನಿತಾ ತನ್ನ ತವರು ಮನೆಯಿಂದ ಬರಲು ವಿಳಂಬ ಮಾಡಿದ್ದಾಳೆ. ಕೇಳಿದರೆ ಗಂಡನಿಗೆ ಆಕ್ರೋಶ ಮತ್ತು ಬೇಸರ ಬರುವಂತಹ ಮಾತುಗಳನ್ನು ಆಡಿದ್ದಾಳೆ.

ಪತ್ನಿಯ ವರ್ತನೆಯಿಂದ ಆಕ್ರೋಶಗೊಂಡ ಬಾಸುಕಿ, ತನ್ನ ಮರ್ಮಾಂಗವನ್ನೇ ಕತ್ತರಿಸಿ ಬೀಸಾಡಿದ್ದಾನೆ. ಬಾಸುಕಿ ಕುಟುಂಬದ ಅನೇಕ ಸದಸ್ಯರು ಹೇಳುವ ಪ್ರಕಾರ ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಸದ್ಯ ಈ ಪ್ರಕರಣ ಇದೀಗ ಬಿಹಾರದಲ್ಲಿ ಭಾರಿ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)