ದೇವನಹಳ್ಳಿ: ಹೆಂಡತಿಯ ಮೇಲೆ ಗಂಡ ರಾಕ್ಷಸ ವರ್ತನೆ ತೋರಿದ್ದು, ಆಕೆಯ ಎರಡೂ ಕೈಗಳಿಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆದಿರುವುದು ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ. ಚಂದ್ರಕಲಾ(45) ಸಂತ್ರಸ್ತ ಮಹಿಳೆ.
20 ವರ್ಷಗಳ ಹಿಂದೆ ಚಂದ್ರಕಲಾ ಹಾಗೂ ಮುನಿಕೃಷ್ಣಪ್ಪ ಮದುವೆಯಾಗಿದ್ದರು. ಈ ದಂಪತಿಗೆ ಮೂರು ಮಕ್ಕಳಿದ್ದರು. ಮನೆಯಲ್ಲಿ ದಿನನಿತ್ಯವೂ ಜಗಳ. ಗಂಡನ ವರ್ತನೆಯಿಂದ ಬೇಸತ್ತು, ಚಂದ್ರಕಲಾ ಕಳೆದ ಮೂರು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಮಗಳು ಹಾಗೂ ಚಂದ್ರಕಲಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಜೀವನ ನಿರ್ವಹಣೆ ಮಾಡುತ್ತಿದ್ದಳು, ನಿನ್ನೆ ಸಂಜೆ ಕೆಲಸಕ್ಕೆ ಹೋಗಿ ತೆರಳುತ್ತಿದ್ದ ವೇಳೆ ಹೆಂಡತಿಗೆ ಅಡ್ಡಗಟ್ಟಿದ್ದಾನೆ, ಮಚ್ಚಿನಿಂದ ಆಕೆಯ ಎರಡು ಕೈಗಳಿಗೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಹಲ್ಲೆಗೊಳಗಾದ ಚಂದ್ರಕಲಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.