ನ್ಯೂಸ್

VIDEO| ಹಾವಿನಾಕಾರದ ವಿಚಿತ್ರ ಜೀವಿ: ನೀವು ಇದುವರೆಗೂ ನೋಡಿರದ ಅಚ್ಚರಿಯ ವಿಡಿಯೋ ಇದು!

ಬ್ಯಾಂಕಾಕ್​: ಜೀವ ಜಗತ್ತು ಎಂದಿಗೂ ಮುಗಿಯದ ಅಚ್ಚರಿಗಳ ತಾಣ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ನೂರಾರು ಬಗ್​ (ಸಣ್ಣ ಕೀಟಗಳು)ಗಳು ಪರಭಕ್ಷಕ ಜೀವಿಗಳಿಂದ ತಪ್ಪಿಸಿಕೊಳ್ಳಲು ಒತ್ತೊತ್ತಾಗಿ ಸೇರಿ ಹಾವಿನ ರೀತಿಯಲ್ಲಿ ಒಟ್ಟಿಗೆ ಚಲಿಸಿದ ಪ್ರಕೃತಿಯ ಕೌತುಕದ ವಿಡಿಯೋ ತುಂಬಾ ವೈರಲ್​ ಆಗಿದೆ.

ಉತ್ತರ ಥಾಯ್ಲೆಂಡ್​ನ ಚಿಯಾಂಗ್​ ಮೈ ಎಂಬಲ್ಲಿ ಕಂಡುಬರುವ ದೇವಸ್ಥಾನದ ಸಮೀಪದಲ್ಲಿ ಬಗ್​ಗಳು ಹಾವಿನಂತೆ ಚಲಿಸಿದ ದೃಶ್ಯವನ್ನು ಬೌದ್ಧ ಸನ್ಯಾಸಿ ಸೊಮಾಚೈ ಔರಮ್​ ಎಂಬುವರು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬಗ್​ಗಳನ್ನು ನೋಡಿದ ಕೂಡಲೇ ಆಕರ್ಷಿತರಾದೆವು. ಅವು ಒಟ್ಟಿಗೆ ಚಲಿಸುತ್ತಿದ್ದುದ್ದು ನಿಜಕ್ಕೂ ಅಚ್ಚರಿಯಾಗಿತ್ತು. ಸ್ವಲ್ಪ ಸಮಯದವರೆಗೆ ಅವು ಹೀಗೆ ಚಲಿಸಿದವು. ನಿಜವಾಗಿಯೂ ಪ್ರಕೃತಿ ತುಂಬಾ ಚತುರ ಎಂದು ಬೌದ್ಧ ಸನ್ಯಾಸಿ ಅಭಿಪ್ರಾಯಪಟ್ಟಿದ್ದಾರೆ.

ಆಹಾರಕ್ಕಾಗಿ ಹುಡುಕಾಡುವಾಗ ಪರಭಕ್ಷಕ ಜೀವಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೂರಾರು ಕೀಟಗಳು ಒಟ್ಟಿಗೆ ಸೇರಿ ಹಾವಿನಂತೆ ಚಲಿಸುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ನೋಡಿದವರು ಒಗ್ಗಟ್ಟಿನಲ್ಲಿ ಬಲವಿದೆ ಅಂಥಾ ಇದಕ್ಕೆ ಹೇಳೋದು ಎನ್ನುತ್ತಿದ್ದಾರೆ. ನೀವು ಒಮ್ಮೆ ವಿಡಿಯೋ ನೀಡಿ ಏನನಿಸುತ್ತದೆ ಕಾಮೆಂಟ್​ ಮಾಡಿ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)