ರೆಡ್‌ಕ್ರಾಸ್‌ನಿಂದ ಶ್ರವಣ ಸಾಧನಗಳ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಡಾ. ದಿನೇಶ್, ಭಾರತಿ ಚಂದ್ರಶೇಖರ್, ನವೀನ್, ಎಸ್.ಎನ್.ಚನ್ನಬಸಪ್ಪ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಇತರರಿದ್ದರು. 
ನ್ಯೂಸ್

ರೆಡ್‌ಕ್ರಾಸ್ ಸಂಸ್ಥೆಯಿಂದ ಮಾನವೀಯ ಸೇವೆ

ಶಿವಮೊಗ್ಗ: ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ರೆಡ್‌ಕ್ರಾಸ್‌ನಿಂದ 25 ಶ್ರಾವಣ ಸಾಧನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮೂಲಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ ರೆಡ್‌ಕ್ರಾಸ್ ಸಂಸ್ಥೆಯ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಸ್ಥೆ ನೂರಾರು ವರ್ಷಗಳಿಂದ ಮಾನವೀಯ ಸೇವೆ ಒದಗಿಸುತ್ತಿದೆ ಎಂದರು.

ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ 25 ಶ್ರವಣ ಸಾಧನಗಳನ್ನು ವಿತರಿಸಲಾಗುವುದು. ಈಗಾಗಲೇ ವ್ಹೀಲ್‌ಚೇರ್‌ಗಳು ಮತ್ತು ಅಂಗವಿಕಲರ ಸಾಧನ ಸಾಮಗ್ರಿ ವಿತರಿಸಲಾಗಿದೆ. ಕರೊನಾ ಸಂದರ್ಭದಲ್ಲಿ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದೆವು ಎಂದು ಹೇಳಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ರೆಡ್ ಕ್ರಾಸ್ ಮಾಜಿ ಸಭಾಪತಿ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಬಲ್ಕಿಶ್‌ಬಾನು, ಪ್ರಮುಖರಾದ ಭಾರತಿ ಚಂದ್ರಶೇಖರ್, ನವೀನ್ ಮುಂತಾದವರಿದ್ದರು.