ಶಿಕಾರಿಪುರ: ನಮ್ಮ ಬದುಕಿನ ಪ್ರತಿ ಹೆಜ್ಜೆಗಳಲ್ಲೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಬದುಕು ಭಗವಂತನಿಗೆ ಸದಾ ಪ್ರಿಯ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ ಹೇಳಿದರು.
ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ದೈವೀ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಾಮಾಜಿಕ ಕಳಕಳಿಯ ಮೂರ್ತರೂಪವಾಗಬೇಕು. ನೊಂದ ಮನಸುಗಳ ದನಿಯಾಗಬೇಕು ಎಂದರು.
ದೈವೀ ಚಿಂತನೆಗಳನ್ನು ಜನರಲ್ಲಿ ಸೃಜಿಸುವಂತೆ ಮಾಡಬೇಕು. ಭಗವಂತನ ಬೆಳಕಿನ ಕೃಪಾದೃಷ್ಟಿಗೆ ಬೀಳುವ ಹಾಗೆ ಅವರನ್ನು ಸಜ್ಜುಗೊಳಿಸಬೇಕು. ನಮ್ಮ ಶರೀರ ಪರೋಪಕಾರಕ್ಕಾಗಿ ಇರಬೇಕು. ಸತ್‌ಚಿಂತನೆಗಳು, ಸದ್ವಿಚಾರಗಳು, ಸಹನೀಯ ಮನಸ್ಸು ನಮ್ಮದಾಗಬೇಕು. ಸಾತ್ವಿಕ ವಿಚಾರಧಾರೆಗಳು ಯಾವತ್ತೂ ಜೀವಂತವಾಗಿರುತ್ತವೆ. ನಾವು ಧರ್ಮ ಮಾರ್ಗದಲ್ಲಿ ನಡೆದರೆ ಧರ್ಮ ನಮಗೆ ನೆರಳಾಗಿ ನಿಲ್ಲುತ್ತದೆ ಎಂದು ಹೇಳಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎನ್.ವಿ.ಈರೇಶ್, ಜಿಲ್ಲಾ ಕಾರ್ಯದರ್ಶಿ ಕೊಟ್ರೇಶ್ವರಪ್ಪ, ಶಿವಪ್ಪಯ್ಯ, ವಿಜಯಕುಮಾರ್, ವೀರಶೈವ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಕಾಂಚನಾ ಕುಮಾರ್, ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಧರ್, ಶಿವಕುಮಾರ್, ಲೀಲಾವತಿ ಇತರರಿದ್ದರು.