ನ್ಯೂಸ್

"ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ": ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ

ಮುಂಬೈ: ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಷಯದಲ್ಲಿ ಭಯ ಎಂಬುದು ಇದ್ದೇ ಇರುತ್ತದೆ. ಹಾಗೆಯೇ ನಟಿ ಹುಮಾ ಖುರೇಷಿ ಅವರಿಗೂ ಭಯವಿದೆ. ಅದೊಂದು ರೀತಿ ಭಾವನಾತ್ಮಕವಾದ ಭಯ. ಹೌದು, ತನ್ನ ಹೆತ್ತವರಿಗೆ ವಯಸ್ಸಾಗುತ್ತಿರುವ ಬಗ್ಗೆ ದೊಡ್ಡ ಭಯ ಕಾಡುತ್ತಿರುವುದಾಗಿ ಹುಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ತರ್ಲಾ ಚಲನಚಿತ್ರದ ಪ್ರಚಾರದ ಚಟುವಟಿಕೆಗಳ ಸಂದರ್ಭದಲ್ಲಿ, ಹುಮಾ ಧೈರ್ಯದಿಂದ ಈ ಆತಂಕವನ್ನು ಹೇಳಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಭಯದ ಬಗ್ಗೆ ಕೇಳಿದಾಗ, “ನನ್ನ ದೊಡ್ಡ ಭಯವೆಂದರೆ ಪ್ರತಿ ಬಾರಿ ನಾನು ದೆಹಲಿಗೆ ಹಿಂದಿರುಗಿದಾಗ, ನನ್ನ ಹೆತ್ತವರಿಗೆ ವಯಸ್ಸಾಗುತ್ತಿರುವುದನ್ನು ನಾನು ನೋಡುತ್ತೇನೆ "ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ". ಚಿಕ್ಕವರಾಗಿದ್ದಾಗ, ನಮ್ಮ ಪೋಷಕರು ನಮ್ಮನ್ನು ಕಾಳಜಿಯಿಂದ ರಕ್ಷಿಸುವುದನ್ನು ನೋಡುತ್ತೇವೆ. ಈಗ ನಾವು ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ತಿಳಿಸಿದ್ದಾರೆ.

ಜುಲೈ 7, 2023 ರಂದು ಬಿಡುಗಡೆಯಾದ ತರ್ಲಾದಲ್ಲಿ ಹುಮಾ ಖುರೇಷಿ ತರ್ಲಾ ದಲಾಲ್ ಪಾತ್ರ ಮಾಡಿದ್ದಾರೆ. ಚಿತ್ರವು ಹಿಟ್ ಆಗಿದ್ದು, ಅದನ್ನು ಚಿತ್ರಿಸಿರುವ ರೀತಿಗೆ ಸಾಕಷ್ಟು ಮೆಚ್ಚುಗೆ ಪಡೆದಿದೆ. ರೋನಿ ಸ್ಕ್ರೂವಾಲಾ, ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ನಿರ್ಮಿಸಿರುವ ಈ ಚಿತ್ರವನ್ನು ಪಿಯೂಷ್ ಗುಪ್ತಾ ನಿರ್ದೇಶಿಸಿದ್ದಾರೆ.