ರಾಣೆಬೆನ್ನೂರ: ತಾಲೂಕಿನ ಹುಲ್ಲತ್ತಿ ಗ್ರಾಮದ ಸರ್ವೇ ನಂಬರ್ 4/3ರಲ್ಲಿ ಯಾವುದೇ ಲೇಔಟ್ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸಮೀಪ ಕೃಷಿ ಭೂಮಿಯಿದೆ. ಆದ್ದರಿಂದ ಈ ಭಾಗದಲ್ಲಿ ಲೇಔಟ್ ಮಾಡುವುದರಿಂದ ಕೃಷಿಗೆ ಸಮಸ್ಯೆ ಆಗಲಿದೆ. ಹೀಗಾಗಿ ಲೇಔಟ್ ಮಾಡಬಾರದು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಪ್ರಮುಖರಾದ ರವೀಂದ್ರಗೌಡ ಪಾಟೀಲ, ಜಗದೀಶ ಕೆರೂಡಿ, ಹನುಮಂತಪ್ಪ ಜ್ಯೋತಿ, ಭರಮಪ್ಪ ಕಂಬಳಿ, ಕೊಟ್ರೇಶಪ್ಪ ಅಂಗಡಿ, ಶಿವಪ್ಪ ಕೆರೂಡಿ, ಕನ್ನಪ್ಪ ಓಲೇಕಾರ, ಗಂಗವ್ವ ಜ್ಯೋತಿ, ರತ್ನವ್ವ ಕೆರೂಡಿ, ಹನುಮವ್ವ ವಡ್ಡರ, ಮಂಜವ್ವ ವಡ್ಡರ ಮತ್ತಿತರರು ಇದ್ದರು.