ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಓಎನ್‌ಜಿಸಿ) ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ಜೂನ್) ಗಮನಾರ್ಹ ಆರ್ಥಿಕ ಸಾಧನೆ ದಾಖಲಿಸಿದೆ. 
ನ್ಯೂಸ್

ಎಂಆರ್‌ಪಿಎಲ್‌ಗೆ ಭರ್ಜರಿ ಲಾಭ-ಮೊದಲ ತ್ರೈಮಾಸಿಕದಲ್ಲಿ 915 ಕೋಟಿ ರೂ. ನಿವ್ವಳ ಲಾಭ

Shravan Kumar Nala
ಮಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಓಎನ್‌ಜಿಸಿ) ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ಜೂನ್) ಗಮನಾರ್ಹ ಆರ್ಥಿಕ ಸಾಧನೆ ದಾಖಲಿಸಿದೆ. ಕಂಪನಿಯ ನಿರ್ದೇಶಕರ ಮಂಡಳಿಯು ಮಂಗಳವಾರ ನಡೆದ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 272 ಕೋಟಿ ನಷ್ಟ ಅನುಭವಿಸಿದ್ದ ಕಂಪನಿ, ಈ ಬಾರಿ ರೂ.915 ಕೋಟಿ ನಿವ್ವಳ ಲಾಭ (ಪಿಎಟಿ) ಗಳಿಸಿದ್ದು ಮಹತ್ವದ ತಿರುವು ಸಾಧಿಸಿದೆ. ತೆರಿಗೆ ಪೂರ್ವ ಲಾಭ (ಪಿಬಿಟಿ) ರೂ.1,215 ಕೋಟಿಗೆ ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 403 ಕೋಟಿ ನಷ್ಟ ದಾಖಲಾಗಿತ್ತು. ಕಂಪನಿಯ ಕಾರ್ಯಾಚರಣಾ ಆದಾಯವು ರೂ.20,989 ಕೋಟಿಯಿಂದ ರೂ. 41,609 ಕೋಟಿಗೆ ಏರಿಕೆಯಾಗಿ ಸುಮಾರು ಶೇ.98ರಷ್ಟು ಬೆಳವಣಿಗೆ ಕಂಡಿದೆ. ಉಆಐಈಅ ಕೂಡ ರೂ.218 ಕೋಟಿಯಿಂದ ರೂ.1,860 ಕೋಟಿಗೆ ಏರಿಕೆಯಾಗಿದೆ.
*ಗಮನಾರ್ಹ ಹೆಚ್ಚಳ
ಉತ್ಪಾದನಾ ಕ್ಷೇತ್ರದಲ್ಲಿಯೂ ಕಂಪನಿ ಉತ್ತಮ ಸಾಧನೆ ಮಾಡಿದ್ದು, ಮೊದಲ ತ್ರೈಮಾಸಿಕದಲ್ಲಿ 4.43 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಸ್ಕರಣೆ ನಡೆಸಿದೆ. ಇದು ಕಳೆದ ವರ್ಷದ ಇದೇ ಅವಧಿಯ 3.52 ಮಿಲಿಯನ್ ಮೆಟ್ರಿಕ್ ಟನ್‌ಗಿಂತ ಗಮನಾರ್ಹ ಹೆಚ್ಚಳವಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ದೇವನಗೊಂಡಿ ಟರ್ಮಿನಲ್‌ನಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಏರ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಪೈಪ್‌ಲೈನ್‌ಗೆ ಅಗತ್ಯ ಅನುಮೋದನೆ ದೊರೆತಿದೆ. ಅಲ್ಲದೆ ಮಂಗಳೂರು, ಹಿಂದೂಪುರ ಮತ್ತು ಎನ್ನೋರ್ ಟರ್ಮಿನಲ್‌ಗಳಲ್ಲಿ ಉತ್ಪನ್ನ ಲೋಡಿಂಗ್ ಕಾರ್ಯ ಆರಂಭಗೊಂಡಿದ್ದು, ನವಿ ಮುಂಬೈನ ಜೆಎನ್‌ಪಿಎ, ಕಾಕಿನಾಡ ಹಾಗೂ ಕೃಷ್ಣಪಟ್ಟಣಂನಲ್ಲಿ ಸಂಗ್ರಹ ಟ್ಯಾಂಕ್‌ಗಳ ಬಾಡಿಗೆ ಒಪ್ಪಂದಗಳಿಗೂ ಸಹಿ ಮಾಡಲಾಗಿದೆ.
*ಹಸಿರು ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ
ಹಸಿರು ಇಂಧನ ಕ್ಷೇತ್ರದಲ್ಲಿಯೂ ಎಂಆರ್‌ಪಿಎಲ್ ಮಹತ್ವದ ಹೆಜ್ಜೆ ಇಟ್ಟಿದ್ದು, ಬಳಸಿದ ಅಡುಗೆ ಎಣ್ಣೆ (ಖಿಛಿ ಇಟಟಜ್ಞಿಜ ಜ್ಝಿ) ಸಹ-ಸಂಸ್ಕರಣೆಯ ಮೂಲಕ ಸಸ್ಟೇನಬಲ್ ಏವಿಯೇಷನ್ ಫ್ಯುಯೆಲ್ (ಎಸ್‌ಎಎಫ್) ಉತ್ಪಾದನೆಗೆ ಐಖಇಇ ಇಣ್ಕಖಐಅ ಪ್ರಮಾಣೀಕರಣವನ್ನು ಪಡೆದಿದೆ. ಇದೇ ವೇಳೆ, ಸ್ವಚ್ಛತಾ ಪಖ್ವಾಡಾ ಪ್ರಶಸ್ತಿ-2023ರಲ್ಲಿ ’ಬಿ’ ವಿಭಾಗದಲ್ಲಿ ದ್ವಿತೀಯ ಬಹುಮಾನ ಹಾಗೂ 2024ರ ಆವೃತ್ತಿಯಲ್ಲಿ ಸಾಂತ್ವನ ಪ್ರಶಸ್ತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಕಂಪನಿ ಪಡೆದಿದೆ.