ತಾಳಿಕೋಟೆ: ಮುಗ್ಧ, ವಯಸ್ಸಾದವರನ್ನು ಕಳ್ಳರು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮುಡಿಸುವ ನಿಟ್ಟಿನಲ್ಲಿ ಪಟ್ಟಣದ ಎಸ್.ಕೆ.ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ತೆರೆದ ಮನೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಯಿತು.
ಅಪರಾಧ ವಿಭಾಗದ ಪಿ.ಎಸ್.ಐ.ಆರ್.ಎಸ್.ಭಂಗಿ ಮಾತನಾಡಿ, ಕಳ್ಳರು ಮುಗ್ದರನ್ನೇ ಟಾರ್ಗೇಟ್ ಮಾಡುತ್ತಿರುವ ಟನೆಗಳು ಹೆಚ್ಚಾಗುತ್ತಿವೆ ಆಭರಣ ಹಾಕಿಕೊಂಡವರು ದಾರಿಯಲ್ಲಿ ಕಂಡರೆ ನಾವು ಕ್ರೆಂ ಪೊಲೀಸ್ನವರು ಅಂತ ಹೇಳಿ ಆಭರಣಗಳನ್ನು ಬಿಚ್ಚಿಸಿ ಕೈಯಲ್ಲಿ ಹಿಡಿದುಕೊಳ್ಳುವಷ್ಟರಲ್ಲಿಯೇ ಕಸಿದುಕೊಂಡು ಹೋಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ರೀತಿ ಬಂಗಾರದ ಆಭಣಗಳನ್ನು ಹೊರಗಡೆ ಹಾಕಿಕೊಂಡು ತಿರುಗಾಡುವಾಗ ಜಾಗೃತೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲಿ, ಅಪರಿಚಿತ ವ್ಯಕ್ತಿಗಳು ತಿರುಗಾಡುವದು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಅಥವಾ 112 ಸಂಖ್ಯೆಗೆ ಕರೆ ಮಾಡಿ ತಿಳಿಸುವ ಮೂಲಕ ಕಳ್ಳತನ ಪ್ರಕಣರಣ ತಡೆಗಟ್ಟಲು ಸಹಕರಿಸಬೇಕೆಂದು ಅವರು ಕೋರಿದರು.
ಎಸ್.ಕೆ.ಪದವಿ ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿಗಳಾದ ಡಾ.ಅಜೇಯ ಅಬ್ಬಾರ, ಎನ್. ಈರಮ್ಮ ಲಕ್ಕಪ್ಪಗೋಳ, ಭಾರತ ಸ್ಕೌಟ್ ಮತತ್ತು ಗೈಡ್ ಅಧಿಕಾರಿ ಡಾ.ಅಶೋಕ ರಾಠೋಡ, ಎನ್.ಸಿ.ಸಿ ಅಧಿಕಾರಿ ಡಾ.ರಾವೇಂದ್ರ ಮಿಸ್ಕಿನ್, ಪೊಲೀಸ್ ಸಿಬ್ಬಂದಿ ಎಂ.ಎಲ್.ಪಟ್ಟೇದ, ಸಂಜೀವ ಜಾಧವ, ದೇವು ಕನ್ನೋಳ್ಳಿ, ರಿಯಾನಾ ಚಿತ್ತರಗಿ, ಬಸವರಾಜ ದೊಡಮನಿ, ಬಸವರಾಜ ಬಲಕಲ್ಲ, ಉಪಸ್ಥಿತರಿದ್ದರು.