ರೇವತಗಾಂವ : ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಯೋತ್ಪಾದನೆ ವಿರೋಧಿ ದಿನಾಚರಣೆ ನಿಮಿತ್ತ ಗ್ರಾ.ಪಂ. ಕಾರ್ಯದರ್ಶಿ ಮಾದಣ್ಣ ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು, ಈ ದಿನ ಭಾರತದ ಸದ್ಭಾವನಾ ದಿನ. ಎಲ್ಟಿಟಿಗೆ ಭಾರತದ ಪ್ರಧಾನಿ ರಾಜೀವ್ ಗಾಂಧಿ ಹುತಾತ್ಮರಾದ ದಿನವನ್ನು ಭಯೋತ್ಪಾದನೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಎಸ್.ಎಂ.ಮಾಳಿ, ಡೇಟಾ ಅಪರೇಟರ್ ಲಾಲಪ್ಪ ಬೀರುಣಗಿ, ಲಾಯಪ್ಪ ಲೋಣಿ, ಸುರೇಶ ಹಕ್ಕೆ, ಬೀರಪ್ಪ ಹಿರೇಕುರುಬರ, ಬಸವರಾಜ ಪೂಜಾರಿ ಉಪಸ್ಥಿತರಿದ್ದರು.