Condemnation of terrorist attacks 
ನ್ಯೂಸ್

ಉಗ್ರರ ದಾಳಿಗೆ ಖಂಡನೆ

Vijayapura - Desk - Shamarao Kulkarni

ಮುದ್ದೇಬಿಹಾಳ: ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರ ಮೇಲೆ ಉಗ್ರರು ನಡೆಸಿರುವ ಪೈಶಾಚಿಕ ದಾಳಿ, ಯನ್ನು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ, ಮಾಜಿ ಶಾಸಕ ಎ.ಎಸ್​.ಪಾಟೀಲ ನಡಹಳ್ಳಿ ಖಂಡಿಸಿದ್ದಾರೆ.

ಈ ಕುರಿತು ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರು ಮಹಿಳೆಯರನ್ನು, ಮುಸ್ಲಿಂಮರನ್ನು ಬದಿಗೆ ಸರಿಸಿ ಹಿಂದು ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪೈಶಾಚಿಕ ಕೃತ್ಯದಲ್ಲಿ ಶಿವಮೊಗ್ಗ ಮೂಲದ ಮಂಜುನಾಥ ಎನ್ನುವವರು ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನ್ಯಾಶನಲ್​ ಕಾನ್ಫರೆನ್ಸ್​ ಸರ್ಕಾರ ಅಸ್ತಿತ್ವದಲ್ಲಿರುವಾಗ ಈ ಉಗ್ರ ಕೃತ್ಯ ಮರುಕಳಿಸಿರುವುದು ಅಲ್ಲಿ ಶಾಂತಿ, ಸುವ್ಯವಸ್ಥೆ ಮತ್ತೇ ಹದಗೆಟ್ಟಿರುವುದರ ಸಂಕೇತವಾಗಿದೆ ಎಂದಿದ್ದಾರೆ.

ದಾಳಿ ನಡೆಸಿದವರೆಲ್ಲ ಸ್ಥಳಿಯರೇ ಆಗಿದ್ದಾರೆ. ಅಲ್ಲಿರುವ ಉಗ್ರರು, ಉಗ್ರರಿಗೆ ಸಹಾಯ ಮಾಡುತ್ತಿರುವ ಸ್ಥಳಿಯ ಮತೀಯವಾದಿಗಳನ್ನು ಸದೆಬಡಿಯುವ ತನಕ ಪ್ರಧಾನಿ ನರೇಂದ್ರ ಮೋದಿ, ಹೃಹಮಂತ್ರಿ ಅಮಿತ್​ಶಾ ಅವರು ವಿರಮಿಸುವುದಿಲ್ಲ ಎನ್ನುವ ಕಟು ಮಾತುಗಳನ್ನು ಈಗಾಗಲೇ ಹೇಳಿದ್ದಾರೆ. ದೇಶದ ಹಿಂದುಗಳು ಅಲ್ಲಿನ ಮತೀಯವಾದವನ್ನು, ಉಗ್ರರ ಅಟ್ಟಹಾಸವನ್ನು ಸದೆಬಡಿಯುವತನಕ ವಿರಮಿಸದಿರುವ ಪ್ರತಿಜ್ಞೆ ತೊಡಬೇಕು ಎಂದು ಕರೆ ನೀಡಿರುವ ಅವರು, ಮೃತ ಕನ್ನಡಿಗರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುವುದಾಗಿ, ಪದ ಮುದ್ದೇಬಿಹಾಳ ಮಂಡಲದಿಂದ ಈ ಟನೆಯನ್ನು ವಿರೋಧಿಸಿ,ಶ್ರದ್ಧಾಂಜಲಿ ಏರ್ಪಡಿಸುವುದಾಗಿ ಅವರು ತಿಳಿಸಿದ್ದಾರೆ.