ಶ್ರೀ ಯಮುನೇಶ್ವರ 
ನ್ಯೂಸ್

ನಾಳೆಯಿಂದ ಯಮುನೇಶ್ವರ ಜಾತ್ರೆ

Vijayapura - Desk - Shamarao Kulkarni

ಬಸವನಬಾಗೇವಾಡಿ: ತಾಲೂಕಿನ ನಾಗೂರು ಗ್ರಾಮದಲ್ಲಿ ಶ್ರೀಯಮುನೇಶ್ವರ ಶ್ರೀಯೋಗಿ ಚಕ್ರವರ್ತಿ ಚಾಂಗದೇವ ಜಾತ್ರಾ ಮಹೋತ್ಸವ ಮಾ.18 ರಿಂದ 22ರ ವರೆಗೆ ಜರುಗಲಿದೆ ಎಂದು ಗ್ರಾ.ಪಂ.ಮಾಜಿ ಅಧ್ಯ ಮಹೇಶ ಮುಳವಾಡ, ಸದಸ್ಯ ಹೈದರಸಾಬ ಚಪರಬಂದ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾವೈಕ್ಯ ಸಾರುವ ಯಮುನೇಶ್ವರ ಜಾತ್ರೆಯಲ್ಲಿ ಸಾಂಸತಿಕ, ಜಾನಪದ ಕಲೆ, ಸಾಹಿತ್ಯ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

18ರಂದು ಸಂಜೆ 5ಕ್ಕೆ ಚಾಂಗದೇವರ ಭಾವಚಿತ್ರ ಮೆರವಣಿಗೆ, 1111 ದೀಪೋತ್ಸವ ಹಾಗೂ ರಾತ್ರಿ 9.30ಕ್ಕೆ ಗಂಧಾಭಿಷೇಕ, ನಾಗಲಿಂಗೇಶ್ವರ ಗೊಂಬೆ ಹಾಗೂ ಕುದುರೆ ಕುಣಿತದೊಂದಿಗೆ ಗಂಧಾಭಿಷೇಕ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ರಾತ್ರಿ 10ಕ್ಕೆ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸುವ ಕಲಾವಿದರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಲಿದೆ.

19 ರಂದು ಜಾತ್ರಾ ಮಹೋತ್ಸವಕ್ಕೆ (ಉರುಸು) ಚಾಲನೆ ನೀಡಲಾಗುವುದು. ಬೆಳಗ್ಗೆ 10ಕ್ಕೆ ಭಜನೆ, ಮಧ್ಯಾಹ್ನ ಟಗರಿನ ಕಾಳಗ, ರಾತ್ರಿ ಕಲಿಯುಗದಲ್ಲಿ ರ್ಜಿಸಿದ ಕರ್ಣಾರ್ಜುನ ನಾಟಕ ಪ್ರದರ್ಶನಗೊಳ್ಳಲಿದೆ.

20 ರಂದು ಬೆಳಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ, ಹೊಲದಲ್ಲಿ ಪುಟ್ಟಿ ಗಾಡಿ ಓಟ, ಸಂಜೆ 4.30ಕ್ಕೆ ಜಂಗಿ ಕುಸ್ತಿ ನಡೆಯಲಿದೆ.

21ರಂದು ಬೆಳಗ್ಗೆ 9ಕ್ಕೆ ಟ್ರಾ$್ಯಕ್ಟರ್​ ಜಗ್ಗುವ ಸರ್ಧೆ, ರಾತ್ರಿ 10ಕ್ಕೆೆ ಒಡಹುಟ್ಟಿದವರು ನಾಟಕ ಪ್ರದರ್ಶನಗೊಳ್ಳುವುದು.

22ರಂದು ಕಬಡ್ಡಿ ಪಂದ್ಯಾವಳಿ, ರಾತ್ರಿ 9ಕ್ಕೆ ವಿವಿಧ ಸಾಂಸತಿಕ ಕಾರ್ಯಕ್ರಮ ಜರುಗಲಿವೆ. ಪ್ರತಿದಿನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಶರಣು ಮರೊಳ, ಚಂದ್ರಶೇಖರ ಮುಳವಾಡ, ಧರ್ಮಣ್ಣ ಪೂಜಾರಿ, ಚಂದ್ರಶೇಖರ ಮರೊಳ, ಮಲ್ಲಯ್ಯ ಹಾಲಳಮಠ, ಮಲ್ಲಪ್ಪ ಪೂಜಾರಿ. ಯಮನೂರ ಅಂಗಡಿಗೇರಿ. ಮುರ್ತುನಸಾಬ ರಗಠಿ ಇದ್ದರು.