ಗೊಳಸಂಗಿ: ಸಮೀಪದ ಮಸೂತಿ ಗ್ರಾಮದಲ್ಲಿ ಮಾ.28 ರಂದು ಜರುಗಲಿರುವ ವೀರಭದ್ರೇಶ್ವರ ಮತ್ತು ಗ್ರಾಮದೇವತೆ ಜಾತ್ರೆ ನಿಮಿತ್ತ ಭಾನುವಾರದಿಂದ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.
ವಿಜಯಪುರದ ಜ್ಞಾನಯೋಗಾಶ್ರಮದ ಸಂಗಮೇಶ್ವರ ಸ್ವಾಮಿಗಳಿಂದ ಮಾ.28 ರವರೆಗೆ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಸ್ಥಳಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯಸ್ವಾಮಿಗಳು ಸಾನಿಧ್ಯ ವಹಿಸುವರು. ಗದಗ ಜಿಲ್ಲೆ ನೀಲೂರಿನ ಶರಣಕುಮಾರ ಹೂಗಾರ ಸಂಗೀತ ಸೇವೆ, ಧಾರವಾಡದ ಪ್ರಕಾಶ ಹೂಗಾರ ತಬಲಾ ಸಾಥ ನೀಡುವರು.
ಮಾ.20 ರಂದು ಕೊಂಚನೂರಿನ ಹರಿಪ್ರಿಯ ಗೋಶಾಲೆಯ ಸವಿತಾನಂದ ಸ್ವಾಮಿಗಳು ಸಾವಯವ ಕೃಷಿ ಮತ್ತು ಮೊಣಕಾಲು ನೋವಿನ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಮಾ.26 ರಂದು ತಾಳಿಕೋಟೆ ಖಾಸ್ಗತೇಶ್ವರ ವಿರಕ್ತಮಠದ ಸಿದ್ಧ್ದಲಿಂಗ ದೇವರು, ಮಾ.27 ರಂದು ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮಿಗಳು, ಮಾ.28 ರಂದು ಯರನಾಳ ಹಿರೇಮಠದ ಶಿವಪ್ರಸಾದ ದೇವರು ಪ್ರವಚನ ನೀಡುವರು ಎಂದು ಜಾತ್ರಾ ಸಮಿತಿ ಸದಸ್ಯ ವಿಶ್ವನಾಥ ಹಿರೇಮಠ ತಿಳಿಸಿದ್ದಾರೆ.