ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾ ಜ್ಯೋತಿ ಕಿರಿಯ ಪ್ರಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ಮಾಡಿದರು. 
ನ್ಯೂಸ್

ಪಾಲಕರನ್ನು ಗೌರವಿಸುವ ಸಂಸ್ಕಾರ ಕಲಿಸಿ

ಇಂಡಿ: ತಂದೆ&ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಶರಣಯ್ಯ ಶಾಸ್ತ್ರಿಗಳು ಹೇಳಿದರು.

ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾ ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಂದೆ&ತಾಯಿಗಳಿಗೆ ಪಾದಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮನೆಯಲ್ಲಿರುವ ತಂದೆ&ತಾಯಿಗೆ ಪ್ರತಿ ನಿತ್ಯ ನಮಸ್ಕಾರ ಮಾಡಿದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮಕ್ಕಳಲ್ಲಿ ಇಂದು ಸಂಸ್ಕಾರ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿ ಸಮಾಜದಲ್ಲಿ ಹೇಗೆ ಬದುಕಬೇಕು, ತಂದೆ&ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚುತ್ತಿರುವ ವೃದ್ಧಾಶ್ರಮಗಳು ಉತ್ತಮ ಸಮಾಜಕ್ಕೆ ಮಾರಕ. ನಾವು ಕನಿಷ್ಠ ಪ ನಮಗೆ ಜನ್ಮ ಕೊಟ್ಟ ತಂದೆ&ತಾಯಿಗಳ ಹಸಿವು ನೀಗಿಸಲು ಒಂದು ತುತ್ತು ಅನ್ನದ ವ್ಯವಸ್ಥೆಯನ್ನಾದರೂ ಮಕ್ಕಳು ಮಾಡಬೇಕು ಎಂದರು.

ಶಿವಾನಂದ ವಾಲಿಕಾರ ಮಾತನಾಡಿ, ತಾಯಿ ನಿಜವಾದ ದೇವತೆ. ತಾಯಿ ಆಶೀರ್ವಾದವಿದ್ದರೆ ಮಗು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.

ಸಂಸ್ಥೆ ಅಧ್ಯ ತಿಪ್ಪಣ್ಣ ಶಿರಕನಹಳ್ಳಿ, ಕಾರ್ಯದರ್ಶಿ ಪುಂಡಲಿಕ ಕಪಾಲಿ, ರಾವೇಂದ್ರ ಬಾವಿಕಟ್ಟಿ, ಅಜೀತ ಬಾವಿಕಟ್ಟಿ, ಶೋಭಾ ಜೋಶಿ, ಜ್ಯೋತಿ ಪವಾರ, ರಂಜಿತಾ ಡಿ.ಕೆ, ಅಶ್ವಿನಿ ರಾಯಜಿ, ರೇಷ್ಮಾ ಗುನ್ನಾಪುರ, ಸೃಷ್ಟಿ ಪಟ್ಟಣಶೆಟ್ಟಿ, ಪ್ರಶಾಂತ ಬಿಳಿಗಿಮಠ, ಪ್ರವಿಣ ಮನಮಿ ಉಪಸ್ಥಿತರಿದ್ದರು.

160 ವಿದ್ಯಾರ್ಥಿಗಳು ತಂದೆ ತಾಯಿಗಳ ಪಾದ ಪೂಜೆ ಮಾಡಿ ಧನ್ಯತೆ ಮೆರೆದರು.