ತಂಗಡಗಿಯ ಚರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಸಿ.ಎಸ್​.ನಾಡಗೌಡ ಅಪ್ಪಾಜಿ ಅವರು ಅಹವಾಲು ಆಲಿಸಿ ಮಾತನಾಡಿದರು. ಶಿವಶಂಕರಗೌಡ ಹಿರೇಗೌಡರ, ಗುರು ತಾರನಾಳ, ಬಾಪುರಾವ ದೇಸಾಯಿ, ಶಂಕ್ರಮ್ಮ ಮಾದರ, ಅ-ಧಿಕಾರಿಗಳು ಇದ್ದರು.  
ನ್ಯೂಸ್

ಶಾಸಕರಿಂದ ಜನಸಂಪರ್ಕ ಸಭೆ

Vijayapura - Desk - Shamarao Kulkarni

ತಂಗಡಗಿ: ಇಲ್ಲಿನ ಚರಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಿ.ಎಸ್​.ನಾಡಗೌಡ ಶನಿವಾರ ಜನಸಂಪರ್ಕ ಸಭೆ ನಡೆಸಿದರು.

ಗ್ರಾ.ಪಂ.ವ್ಯಾಪ್ತಿಯ ಗಂಗೂರ, ಕುಂಚಗನೂರ, ಕಮಲದಿನ್ನಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಜೆಜೆಎಂ ಯೋಜನೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಜಲಧಾರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಸರ್ಕಾರಿ ಹಾಸ್ಟೆಲ್​ ಸೌಲಭ್ಯ ಬೇಕು. ಹಳ್ಳದ ದಾರಿ, ತಂಗಡಗಿ&ಕೋಳೂರು ರಸ್ತೆ, ಹೊಲಕ್ಕೆ ಹೋಗುವ ರಸ್ತೆ, ಶಾಲಾ ಕಟ್ಟಡ, ಚರಲಿಂಗೇಶ್ವರ ದೇವಾಲಯ ಕಲ್ಯಾಣ ಮಂಟಪಕ್ಕೆ ಅನುದಾನ, ತಂಗಡಗಿಗೆ ಸರ್ಕಾರಿ ಪದವಿ ಪೂರ್ವ ಅಥವಾ ಪದವಿ ಕಾಲೇಜು, ಬಡಿಗತನ ವೃತ್ತಿಗೆ ಅವಕಾಶ ಸೇರಿ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಮಂಡಿಸಿದರು.

ಅಹವಾಲು ಆಲಿಸಿದ ಶಾಸಕರು, ಎಲ್ಲೆಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಆಗಿಲ್ಲವೋ, ನೀರು ಬಂದಿಲ್ಲವೋ ಅಂಥಲ್ಲೆಲ್ಲ ಹಸ್ತಾಂತರ ಮಾಡಿಕೊಳ್ಳಬಾರದು. ಮೇಲಧಿಕಾರಿಗೆ ವರದಿ ಮಾಡಿ ಬಿಲ್​ ತಡೆಹಿಡಿಯಬೇಕು ಎಂದು ತಾಪಂ ಇಒ ನಿಂಗಪ್ಪ ಮಸಳಿಗೆ ಸೂಚಿಸಿದರು. ಹಾಸ್ಟೆಲ್​ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಸಚಿವ ಶಿವರಾಜ ತಂಗಡಗಿ ಅವರ ಹುಟ್ಟೂರು ತಂಗಡಗಿ ಆಗಿದೆ. ತಂಗಡಗಿ ಹಾಗೂ ತಾಳಿಕೋಟೆಗೆ ಹಾಸ್ಟೆಲ್​ ಮಂಜೂರು ಮಾಡಿಸುವಂತೆ ಹೇಳಿದ್ದೇನೆ ಎಂದರು.

ತಂಗಡಗಿ ಮೂಲಕ ರಾಜ್ಯ ಹೆದ್ದಾರಿ ಹಾಯ್ದು ಹೋಗಿದೆ. ಅದರ ವಿಸ್ತರಣೆಗಾಗಿ ಮಾರ್ಗ ಮಧ್ಯೆ ಬರುವ ಮನೆಯವರಿಗೆ ಈಗಾಗಲೇ ಪರಿಹಾರ ನೀಡಿದ್ದಾರೆ. ಆದರೂ ಜನರು ಸ್ಥಳಾಂತರಗೊಳ್ಳದೆ ಅಲ್ಲೇ ಇರುವುದು ಸಂಚಾರ ಸಮಸ್ಯೆಗೆ ಕಾರಣವಾಗಿದೆ ಎಂದಾಗ ಕೆಲ ನಿವಾಸಿಗಳು ನಮಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡುವುದಾಗಿ ರಸ್ತೆ ಮಾಡುವಾಗ ಅಧಿಕಾರಿಗಳು ತಿಳಿಸಿದ್ದರು ಎಂದರು. ರಸ್ತೆ ಮಾಡಲು ಬಂದವರು ನಿವೇಶನ ಹೇಗೆ ಕೊಡುತ್ತಾರೆ? ಪಂಚಾಯಿತಿಯವರನ್ನು ನಿವೇಶನಕ್ಕಾಗಿ ಕೇಳಿ ಎಂದು ಶಾಸಕರು ತಿಳಿಸಿದರು.

ಗೃಹಲಕ್ಷಿ$್ಮ ಹಣ ಬಂದಿಲ್ಲ ಎನ್ನುವ ಮಹಿಳೆಯರ ದೂರಿಗೆ ಸ್ಪಂದಿಸಿದ ಶಾಸಕರು, ಬಜೆಟ್​ನಲ್ಲಿ ಅನುಮೋದನೆಯಾಗಿದೆ. ಮೇ ತಿಂಗಳ ಒಳಗಾಗಿ ಬಾಕಿ ಹಣ ಜಮಾ ಆಗುತ್ತದೆ. ವಿರೋಧ ಪದವರು ಗ್ಯಾರಂಟಿ ನಿಲ್ಲಿಸುವಂತೆ ಹೇಳುತ್ತಿದ್ದಾರೆ ಎಂದರು.

ಗ್ರಾಪಂ ಅಧ್ಯೆ ಶಂಕ್ರಮ್ಮ ಮಾದರ, ಪಿಡಿಒ ಎಸ್​.ಎಸ್​.ಗಣಾಚಾರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಶಿವಶಂಕರಗೌಡ ಹಿರೇಗೌಡರ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಗುರು ತಾರನಾಳ, ತಾ.ಪಂ. ಮಾಜಿ ಸದಸ್ಯ ಶ್ರೀಶೈಲ ಮರೋಳ, ರಾಜು ಕೊಂಗಿ, ಬಾಪುರಾವ ದೇಸಾಯಿ, ಅಧಿಕಾರಿಗಳು ಪಾಲ್ಗೊಂಡಿದ್ದರು.