ಇಂಡಿ: ವಿಜಯಪುರ ನಗರದಲ್ಲಿ ಜಿಲ್ಲಾ ಮೋಚಿಗಾರ ೇಮಾಭಿವೃದ್ಧಿ ಸಂದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಆಯೋಜಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದುಒತ್ತಾಯಿಸಿ ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಸಂದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಸಂದ ತಾಲೂಕು ಅಧ್ಯ ಬಸವರಾಜ್ ಬಡದಾಳ ಮಾತನಾಡಿ, ಸಂದಿಂದ ಮಾರ್ಚ್ 23ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಆಚರಿಸಲು ನಿರ್ಧರಿಸಲಾಗಿದೆ. ಪೊಲೀಸ್ ಪರೇಡ್ ಮೈದಾನ ಹತ್ತಿರವಿರುವ ಹನುಮಂತ ದೇವರಗುಡಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಟ್ರಸ್ಟ್ನವರು ಕಾರ್ಯಕ್ರಮ ಮಾಡಲು ಸ್ಥಳ ಕೊಡುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದ್ದಾರೆ. ಸ್ಥಳಾವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂದ ಕಾರ್ಯದರ್ಶಿ ಪ್ರಭಾಕರ ಮಂಡೋಲಿ, ಅನುಸೂಯ ಮದರಿ, ಚೇತನಕುಮಾರ ಮದರಿ ಇದ್ದರು.