ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಪಂ.ಪಂ. ಅಧ್ಯಕ್ಷ ಹಾಗೂ ಸದಸ್ಯರು. 
ನ್ಯೂಸ್

ಕಟ್ಟಡ ಪರವಾನಗಿ ಇಲ್ಲದೆ ಇ-ಸ್ವತ್ತು ಮಾಡಿಕೊಡಿ

Vijayapura - Desk - Shamarao Kulkarni

ಕೊಲ್ಹಾರ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ, ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಅವಮಾನ ಮಾಡಿದ ಟನೆ ಮಂಗಳವಾರ ನಡೆದಿದೆ. ಇದರಿಂದ ಕೆಲ ಕಾಲ ಪತ್ರಕರ್ತರ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಗದ್ದಲದ ನಡುವೆಯೇ ಆರಂಭವಾದ ಸಾಮಾನ್ಯ ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದವು.

ಸದಸ್ಯ ಮಹಾಂತೇಶ ಗಿಡ್ಡಪ್ಪಗೋಳ ಮಾತನಾಡಿ, ಪಟ್ಟಣದ ಜನತೆ 25 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದಾರೆ. ಈಗ ಇ&ಸ್ವತ್ತು ಮಾಡಿಸಲು ಉತಾರ ನೀಡಲು ಕಟ್ಟಡದ ಪರವಾನಗಿ ಕೇಳಿದರೆ ಅವರು ಎಲ್ಲಿಂದ ಕೊಡಬೇಕು? ಕಟ್ಟಡ ಪರವಾನಗಿ ಇಲ್ಲದೆ ಇ&ಸ್ವತ್ತು ಉತಾರ ನೀಡಲು ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲ. ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ. ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ. ಅಂಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಪಟ್ಟಣದಲ್ಲಿ ರಸ್ತೆ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ತೌಶ್​ೀ ಗಿರಗಾವಿ ಸಭೆಯ ಗಮನಕ್ಕೆ ತಂದರು.

ಪಂ.ಪಂ. ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಮುಖ್ಯಾಧಿಕಾರಿ ಉಮೇಶ ಚಲವಾದಿ, ಸದಸ್ಯರಾದ ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಭಜಂತ್ರಿ, ತೌಶ್​ೀ ಗಿರಗಾವಿ, ಲಕ್ಷಿ$್ಮಬಾಯಿ ಜಿಡ್ಡಿಬಾಗಿಲ, ನಿಂಗಪ್ಪ ಗಣಿ, ಲಕ್ಷಿ$್ಮಬಾಯಿ ಹೆರಕಲ್ಲ, ಅಪ್ಪೇಶಿ ಮಟ್ಯಾಳ ಉಪಸ್ಥಿತರಿದ್ದರು.