ದೇವರಹಿಪ್ಪರಗಿ: ಜಗದ್ಗುರು ರೇಣುಕಾಚಾರ್ಯರ ಕುರಿತ ಸಮಗ್ರ ಮಾಹಿತಿಯನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕೆಂದು ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಚರಿಸಿದ ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೇಣಕಾಚಾರ್ಯರು ಪರಶಿವನ ಪಂಚಬ್ರಹ್ಮ ಮುಖದಿಂದ ಆವಿರ್ಭವಿಸಿದ ಪಂಚಾಚಾರ್ಯರಲ್ಲಿ ಪ್ರಥಮ ಗಣೇಶ್ವರರಾಗಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮೌಲ್ಯವನ್ನು ಜಗಕ್ಕೆ ಸಾರಿದ್ದಾರೆ ಎಂದರು.
ತಹಸೀಲ್ದಾರ್ ಪ್ರಕಾಶ ಸಿಂದಗಿ, ನಿವೃತ್ತ ನೌಕರರ ಸಂದ ತಾಲೂಕಾಧ್ಯ ಸಿ.ಕೆ. ಕುದರಿ, ಜಂಗಮಾಭಿವೃದ್ಧಿ ಸಂದ ಅಧ್ಯ ಸೋಮಶೇಖರ ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ಉಪತಹಸೀಲ್ದಾರ್ ಸುರೇಶ ಮ್ಯಾಗೇರಿ, ಕಸಾಪ ತಾಲೂಕಾಧ್ಯ ಜಿ.ಪಿ. ಬಿರಾದಾರ, ಬಂಡೆಪ್ಪಗೌಡ ಬಿರಾದಾರ, ಕೆ.ಎಸ್. ಕೋರಿ, ಗಣೇಶ ಹಿರೇಮಠ, ಗಂಗಾಧರ ಬಬಲೇಶ್ವರ, ಮಹೇಶ ಬುದ್ನಿ, ಬಸವರಾಜ ತಾಳಿಕೋಟಿ, ಆನಂದ ಪರದೇಶಿಮಠ, ಡಾ. ಮಂಜುನಾಥ ಮಠ, ರಮೇಶ ಮಶಾನವರ, ಶ್ರೀಶೈಲ ದಾನಗೊಂಡ, ರಾಮು ದೇಸಾಯಿ, ಕುಮಾರಸ್ವಾಮಿ ಹಿರೇಮಠ, ಆನಂದ ಜಡಿಮಠ, ಶಿವಪ್ಪ ವಸ್ತ್ರದ, ಭದ್ರಯ್ಯ ಮಲ್ಲಿಕಾರ್ಜುನಮಠ ಪಾಲ್ಗೊಂಡಿದ್ದರು.